ನ್ಯೂಸ್

ರಿಲೀಸ್ ಆಯ್ತು 'ಚಂದ್ರಮುಖಿ -2' ಪೋಸ್ಟರ್​​; ಆಕರ್ಷಕ ಲುಕ್​​ನಲ್ಲಿ ನಟಿ ಕಂಗನಾ ರಣಾವತ್

ಮುಂಬೈ: ರಾಷ್ಟ್ರಪ್ರಶಸ್ತಿ ವಿಜೇತ ನಟಿ, ಬಾಲಿವುಡ್​ ಬೆಡಗಿ ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷಿತ 'ಚಂದ್ರಮುಖಿ 2' ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಇದೀಗ ಚಿತ್ರತಂಡ ಅಧಿಕೃತವಾಗಿ ಅನಾವರಣಗೊಳಿಸಿದೆ.

'ಚಂದ್ರಮುಖಿ 2' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿದ್ದು, ಚಿತ್ರದಲ್ಲಿ ಕಂಗನಾ ಅವರ ಪಾತ್ರ ಹೇಗಿರಲಿದೆ ಎಂಬುದರ ಕುರಿತು ಅಭಿಮಾನಿಗಳಲ್ಲಿ ಈ ಹಿಂದಿನಿಂದಲೂ ಭಾರೀ ಕುತೂಹಲ ಮೂಡಿತ್ತು. ಸದ್ಯ ಇದೀಗ ಚಿತ್ರತಂಡ ಕಂಗನಾ ರಣಾವತ್​ ಅವರ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್ ಮಾಡುವ ಮುಖೇನ ಸಿನಿಪ್ರಿಯರಿಗೆ ಚಿತ್ರದ ಬಗ್ಗೆ ಮಾಹಿತಿ ನೀಡಿದೆ. ಸಿನಿಮಾದಲ್ಲಿ ರಾಘವ ಲಾರೆನ್ಸ್ ಮತ್ತು ಕಂಗನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಹಾರರ್ ಥ್ರಿಲ್ಲರ್ ಜಾನರ್​ನಲ್ಲಿ ಮೂಡಿಬಂದಿರುವ ಈ ಚಿತ್ರ, ಚಂದ್ರಮುಖಿ ಚಿತ್ರದ ಮುಂದಿನ ಭಾಗವಾಗಿದೆ. ಪೋಸ್ಟರ್‌ನಲ್ಲಿ ಕಂಗನಾ ಆಕರ್ಷಕವಾಗಿ ಕಾಣಿಸಿಕೊಂಡಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಪೋಸ್ಟರ್​ ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಿ.ವಾಸು ನಿರ್ದೇಶನದ ಚಂದ್ರಮುಖಿ-2 ಚಿತ್ರವನ್ನು ಗಣೇಶ ಹಬ್ಬಕ್ಕೆ ಬಿಡುಗಡೆಗೊಳಿಸಲು ಚಿತ್ರ ತಯಾರಕರು ಯೋಜಿಸಿದ್ದಾರೆ ಎನ್ನಲಾಗಿದೆ.

ಬಿಗ್​ ಬಜೆಟ್‌ ಚಿತ್ರವನ್ನು ತಮಿಳಿನ ಪ್ರಮುಖ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ವಡಿವೇಲು, ರಾವ್ ರಮೇಶ್, ಸೃಷ್ಟಿ ಡಾಂಗೆ, ಲಕ್ಷ್ಮಿ ಮೆನನ್, ರಾಧಿಕಾ ಶರತ್‌ಕುಮಾರ್ ಮತ್ತು ಮಹಿಮಾ ನಂಬಿಯಾರ್ ಸೇರಿದಂತೆ ಇತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).