ನ್ಯೂಸ್

Chanakya Niti: ನಾಯಿಯಿಂದ ಈ ಗುಣಗಳನ್ನು ಕಲಿಯಿರಿ: ಜೀವನದಲ್ಲಿ ನೀವು ವಿಫಲರಾಗುವುದಿಲ್ಲ..!

Chanakya Niti: ಇಂದು ಅನೇಕ ಕುಟುಂಬಗಳು ತಮ್ಮ ನಾಯಿಗಳನ್ನು ಕುಟುಂಬ ಸದಸ್ಯರೆಂದು ಪರಿಗಣಿಸುತ್ತರೆ. ಅದರೆ ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ, ಅನೇಕ ಮಾನವರು ಇದರ ನಿಷ್ಠಾವಂತ ನಡವಳಿಕೆಯಿಂದ ಕಲಿಯಬೇಕು ಎಂದು ಹೇಳಿದ್ದಾನೆ. ತನ್ನ ಸ್ವಾರ್ಥಕ್ಕಾಗಿ ಇತರರ ಸಂತೋಷವನ್ನು ನಾಶಮಾಡುವ ವ್ಯಕ್ತಿಯು ನಾಯಿಯಿಂದ ಜೀವನ ಪಾಠವನ್ನು ಕಲಿಯಬೇಕೆಂದು ಸೂಚಿಸುತ್ತಾನೆ.

ತಮಗೆ ಸಿಕ್ಕಿದ್ದರಲ್ಲಿ ತೃಪ್ತವಾಗಿರಬೇಕು

ನಾಯಿಗಳು ತಮಗೆ ಸಿಕ್ಕಿದ್ದರಲ್ಲಿ ತೃಪ್ತವಾಗಿರುತ್ತವೆ. ಅಲ್ಲದೆ, ಸಿಕ್ಕ ಆಹಾರವನ್ನು ಬಹಳ ಸಂತೋಷದಿಂದ ತಿನ್ನುತ್ತವೆ. ನಾಯಿಗಳ ಈ ಗುಣವು ಜೀವನದಲ್ಲಿ ನಮಗೆ ಸಿಕ್ಕಿದ್ದರಲ್ಲಿ ತೃಪ್ತರಾಗಲು ಕಲಿಸುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

ನಾವು ತಿನ್ನುವ ಆಹಾರವನ್ನು ಗೌರವಿಸಬೇಕು

ಆಹಾರದ ವಿಷಯಕ್ಕೆ ಬಂದಾಗ, ನಾವು ತಿನ್ನುವ ಆಹಾರವನ್ನು ಗೌರವಿಸಬೇಕು ಎಂದು ಚಾಣಕ್ಯ ಹೇಳುತ್ತಾನೆ. ನಾಯಿಯ ಬಗ್ಗೆ ಅತ್ಯಂತ ವಿಶೇಷವಾದ ವಿಷಯವೆಂದರೆ ನಾಯಿ ಗಾಢ ನಿದ್ರೆಯಲ್ಲಿದ್ದಾಗಲೂ, ಅದು ಸಣ್ಣ ಶಬ್ದವನ್ನು ಕೇಳಿದ ತಕ್ಷಣ ಎಚ್ಚರಗೊಳ್ಳುತ್ತದೆ. ಈ ಗುಣವು ನಮ್ಮ ಕೆಲಸದಲ್ಲಿ ಯಾವಾಗಲೂ ಜಾಗರೂಕರಾಗಿರಲು ಮತ್ತು ಗಮನಹರಿಸಲು ನಮಗೆ ಕಲಿಸುತ್ತದೆ.

ಯಾವುದೇ ಸವಾಲಿಗೆ ಸಿದ್ಧವಿರಬೇಕು

ನಾವು ವಿಶ್ರಾಂತಿ ಪಡೆಯುತ್ತಿರುವಾಗಲೂ ನಮ್ಮ ಗುರಿ ಮತ್ತು ಜವಾಬ್ದಾರಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅಲ್ಲದೆ, ಜೀವನದಲ್ಲಿ ಯಾವುದೇ ಸವಾಲಿಗೆ ಸಿದ್ಧರಾಗಿರುವುದು ಯಶಸ್ಸಿನ ಕೀಲಿಕೈ ಎಂದು ಚಾಣಕ್ಯ ಹೇಳುತ್ತಾನೆ.

ನಿಷ್ಠೆ ಇರಬೇಕು

ನಾಯಿಗಳು ತಮ್ಮ ಮಾಲೀಕರಿಗೆ ತುಂಬಾ ನಿಷ್ಠರಾಗಿರುತ್ತವೆ. ಇವು ತಮ್ಮ ಮಾಲೀಕರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತವೆ. ಈ ಗುಣವು ನಮ್ಮ ಕುಟುಂಬ, ಸ್ನೇಹಿತರು ಮತ್ತು ಸಮಾಜಕ್ಕೆ ನಿಷ್ಠರಾಗಿರಲು ನಮಗೆ ಕಲಿಸುತ್ತದೆ.

ನಾವು ಯಾವಾಗಲೂ ಕೃತಜ್ಞರಾಗಿರಬೇಕು

ನಮಗೆ ಒಳ್ಳೆಯದನ್ನು ಮಾಡುವವರಿಗೆ ನಾವು ಯಾವಾಗಲೂ ಕೃತಜ್ಞರಾಗಿರಬೇಕು ಮತ್ತು ಪ್ರಾಮಾಣಿಕರಾಗಿರಬೇಕು. ಇದೇ ರೀತಿ, ಒಬ್ಬ ವ್ಯಕ್ತಿಯು ತಾನು ಮಾಡುವ ಕೆಲಸಕ್ಕೆ ನಿಷ್ಠನಾಗಿರಬೇಕು. ಚಾಣಕ್ಯನು ಮೋಸ ಮಾಡಬಾರದು ಎಂದು ಹೇಳುತ್ತಾನೆ.

ನಿರ್ಭಯತೆ ಮತ್ತು ಧೈರ್ಯ

ಚಾಣಕ್ಯ ನೀತಿಯ ಪ್ರಕಾರ, ಮನುಷ್ಯರು ನಿರ್ಭಯತೆ ಮತ್ತು ಧೈರ್ಯದ ಗುಣಗಳನ್ನು ನಾಯಿಗಳಿಂದ ಕಲಿಯಬೇಕು. ನಾಯಿಯು ತನ್ನ ಮಾಲೀಕರಿಗೆ ಹಾನಿ ಮಾಡುವ ಯಾರನ್ನಾದರೂ ಧೈರ್ಯದಿಂದ ಎದುರಿಸುತ್ತದೆ. ಇದು ತನ್ನ ಜೀವವನ್ನು ಪಣಕ್ಕಿಟ್ಟು ತನ್ನ ಮಾಲೀಕರನ್ನು ರಕ್ಷಿಸುತ್ತದೆ.

ನಿರ್ಭೀತವಾಗಿರಬೇಕು

ಒಬ್ಬ ವ್ಯಕ್ತಿಯು ಯಾವಾಗಲೂ ನಿರ್ಭೀತನಾಗಿರಬೇಕು. ಇದರಿಂದ ಅವನು ಕಷ್ಟಗಳನ್ನು ಧೈರ್ಯದಿಂದ ಎದುರಿಸಬಹುದು. ಅಲ್ಲದೆ, ಈ ಗುಣವು ನಮ್ಮ ಗುರಿಗಳು ಮತ್ತು ತತ್ವಗಳನ್ನು ರಕ್ಷಿಸಲು ನಾವು ನಿರ್ಭೀತವಾಗಿ ನಿಲ್ಲಬೇಕೆಂದು ನಮಗೆ ಕಲಿಸುತ್ತದೆ.

ಜೀವನದಲ್ಲಿ ಅನ್ಯಾಯವನ್ನು ವಿರೋಧಿಸಲು ಅವಕಾಶ ಬಂದಾಗ, ನಾವು ಅದನ್ನು ಧೈರ್ಯದಿಂದ ಎದುರಿಸಬೇಕು ಎಂದು ಇದು ನಮಗೆ ಕಲಿಸುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. (ಏಜೆನ್ಸೀಸ್)ವಿಶೇಷ ಸೂಚನೆ:ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.