ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 12 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 32ನೇ ಯುವ ಸಂಘಟನೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಗಳನ್ನು ಜುಲೈ 2024 ರಿಂದ ಜನವರಿ 2025ರ ವರೆಗೆ 25 ಭಾನುವಾರಗಳಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸಲಾಗುವುದು. ಆಯ್ಕೆಯಾದ ಸದಸ್ಯರುಗಳಿಗೆ ವನ್ಯಪ್ರಾಣಿಗಳ ವೈವಿಧ್ಯತೆ, ಸಂರಕ್ಷಣೆ ಹಾಗೂ ಮೃಗಾಲಯ ಪರಿಸರದಲ್ಲಿ ಅವುಗಳ ನಿರ್ವಹಣೆ, ಪ್ರಾಣಿ ವರ್ತನೆ ಅಧ್ಯಯನದ ಬಗ್ಗೆ ಕಾಲಕಾಲಿಕ ತರಗತಿಗಳ ಮೂಲಕ ತಿಳಿಯಪಡಿಸಲಾಗುವುದು.
ಆಸಕ್ತಿಯುಳ್ಳವರು ಜೂನ್ 17 ರಿಂದ 22 ರವರೆಗೆ ಮೃಗಾಲಯದ ಕಛೇರಿಯಿಂದ ಅರ್ಜಿಯನ್ನು ಪಡೆದು, ಜೂನ್ 22 ರೊಳಗೆ ಸಲ್ಲಿಸಬಹುದು. ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:9686668099 ಅಥವಾ ಇಮೇಲ್ edumysore99@gmail.comU ನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಚಾಮರಾಜರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.