ನ್ಯೂಸ್

ಕೇರಳ ಲಾಟರಿ ಮಾರುತ್ತಿದ್ದವನ ಬಂಧನ

ಗುಂಡ್ಲುಪೇಟೆ: ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಮಣಿ (44) ಎಂಬಾತ ಗುರುವಾರ ಹಳೇ ಆಸ್ಪತ್ರೆ ರಸ್ತೆಯಲ್ಲಿ ಕೇರಳ ಲಾಟರಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯಿಂದ 4,600 ರೂ. ಮೌಲ್ಯದ ಲಾಟರಿ ಟಿಕೆಟ್‌ಗಳು ಹಾಗೂ 10,640 ರೂ. ನಗದನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಸರ್ಕಲ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಸಾಹೇಬಗೌಡ, ಸಿಬ್ಬಂದಿ ಲೋಕೇಶ್ ಹಾಗೂ ಪ್ರಭುಸ್ವಾಮಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.