ಚಾಮರಾಜನಗರ: ಕೇಂದ್ರ ಸರ್ಕಾರದಿಂದ ಇತ್ತೀಚಿಗೆ ಮಂಡಿಸಿದ ಬಜೆಟ್ ಜನವಿರೋಯಾಗಿದೆ ಎಂದು ಸಮಾಜವಾದಿ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ಜಿ.ಎಂ.ಗಾಡ್ಕರ್ ಟೀಕಿಸಿದರು. ಇದು ಅಮೃತ ಕಾಲದ ಬಜೆಟ್ ಅಲ್ಲ. ರೈತರು, ಕಾರ್ಮಿಕರು, ಹಿಂದುಳಿದ ಜಾತಿಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ದುಡಿಯುವ ದುರ್ಬಲ ಸಮಾಜಗಳ ಬದುಕು ಮತ್ತು ರಕ್ಷಣೆಯನ್ನು ಹಂತ, ಹಂತವಾಗಿ ನಾಶ ಮಾಡುವ ಕರಾಮತ್ತು ಈ ಬಜೆಟ್‌ನಲ್ಲಿ ಅಡಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
2024ರ ಲೋಕಸಭಾ ಚುನಾವಣೆಗಾಗಿ ಬಜೆಟ್ ಮೂಲಕ ಮಂಕುಬೂದಿ ಎರಚುವ ಕೆಲಸ ಮಾಡಲಾಗುತ್ತಿದೆ. ಸರ್ಕಾರ ಸಾಲ ಮಾಡಿ, ಕಲ್ಯಾಣ ಯೋಜನೆಗಳಿಗೆ ಕಡಿತ ಮಾಡಿ ಬಂಡವಾಳ ವೆಚ್ಚವನ್ನು ಹತ್ತು ಲಕ್ಷ ಕೋಟಿ ರೂಪಾಯಿಗಳಿಗೆ ಏರಿಸಿದೆ. ದೇಶದ ಬಹುಪಾಲು ಜನ ಈಗಲೂ ಗ್ರಾಮ ವಾಸಿಗಳು. ಗ್ರಾಮೀಣ ಅಭಿವೃದ್ಧಿಯ ಮೇಲಿನ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಬೇಕು. ಆದರೆ ವಾಸ್ತವವಾಗಿ ತಗ್ಗಿಸಲಾಗಿದೆ. ಕಳೆದ ವರ್ಷದ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಶೇಕಡ 0.6ರಷ್ಟು ತಗ್ಗಿಸಲಾಗಿದೆ. ಅಂದರೆ ಬಜೆಟ್‌ನಲ್ಲಿ ಹಂಚಿಕೆ ಮಾಡಿರುವಂತೆ 2.38 ಲಕ್ಷ ಕೋಟಿ ರೂಪಾಯಿಗಳನ್ನು ತಗ್ಗಿಸಲಾಗಿದೆ ಎಂದು ಹೇಳಿದರು.
ಮಹಾತ್ಮಗಾಂ ನರೇಗಾ ಯೋಜನೆ ಹಂಚಿಕೆ ಕೂಡ ಭಾರಿ ಪ್ರಮಾಣದ ಕುಸಿತ ಕಂಡಿದೆ. ಗ್ರಾಮೀಣ ಬಡ ಕುಟುಂಬಗಳಿಗೆ ವರ್ಷದಲ್ಲಿ ನೂರು ದಿನ ಉದ್ಯೋಗ ಒದಗಿಸುವುದು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ದೇಶ, ನೋಂದಣಿ ಮಾಡಿಕೊಂಡ ಎಲ್ಲ ಕುಟುಂಬಗಳಿಗೂ ನೂರು ದಿನಗಳ ಉದ್ಯೋಗ ಗಗನ ಕುಸುಮ ಎಂದು ದೂರಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ 2022ರ ಹೊತ್ತಿಗೆ ಕೃಷಿ, ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ನೀಡಿದ್ದರು. ಆದರೆ ದುಪ್ಪಟ್ಟು ಆಗುವುದು ಒತ್ತಿಟ್ಟಿಗಿರಲಿ. ಕೃಷಿ ಆದಾಯ ವರ್ಷದಿಂದ ವರ್ಷಕ್ಕೆ ಕುಸಿಯತೊಡಗಿದೆ ಎಂದು ಹೇಳಿದರು. ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಎ.ಎನ್.ಶಿವಲಿಂಗಪ್ಪ, ಮಹದೇವಶೆಟ್ಟಿ, ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಪದಾಕಾರಿಗಳಾದ ಬಂಗಾರಸ್ವಾಮಿ, ರಂಗಸ್ವಾಮಿ ಇದ್ದರು.