ನ್ಯೂಸ್

ನೂತನ ವರ್ಷ ಸಂಭ್ರಮಾಚರಣೆ ಬಂದೋಬಸ್ತ್​ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್​ ಪೇದೆ ಅಪಘಾತದಲ್ಲಿ ಸಾವು

ಚಾಮರಾಜನಗರ: ಹೊಸ ವರ್ಷಾಚರಣೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿ ಮನೆಗೆ ಹಿಂತಿರುಗುವಾಗ ಪೊಲೀಸ್​ ಪೇದೆಯೊಬ್ಬರು ಆಯ ತಪ್ಪಿ ಬೈಕ್​ನಿಂದ ಬಿದ್ದು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ಮುಖ್ಯರಸ್ತೆಯ ಹರಳೆ ಬಳಿ ನಡೆದಿದೆ.

ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್​.ಎಸ್. ದೊಡ್ಡಿ ಗ್ರಾಮದ ಸಿದ್ದರಾಜು ಘಟನೆಯಲ್ಲಿ ಮೃತಪಟ್ಟವರು.

ಹೊಸ ವರ್ಷ ಸಂಭ್ರಮಾಚರಣೆಯ ಬಿಗಿ ಬಂದೋಬಸ್ತ್​ಗಾಗಿ ನರೀಪುರ ಪಾಯಿಂಟ್​ಗೆ ಪೇದೆ ಸಿದ್ದರಾಜು ಅವರನ್ನು ನಿಯೋಜಿಸಲಾಗಿತ್ತು.‌ ರಾತ್ರಿ ಕರ್ತವ್ಯ ಮುಗಿಸಿ ಹಿಂತಿರುಗುವಾಗ ಬೈಕ್​ ರಸ್ತೆ ಗುಂಡಿಗೆ ಬಿತ್ತು. ನಂತರ ಬೈಕ್ ನಿಯಂತ್ರಣ ತಪ್ಪಿ ಪಕ್ಕದಲ್ಲೇ ನಿರ್ಮಾಣಗೊಂಡಿದ್ದ ಕಾಲುವೆಗೆ ಬೈಕ್​ ಉರುಳಿ ಬಿತ್ತು. ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟರು.


ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.