ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ರಾಯಭಾರಿ ಆಗಿದ್ದಾರೆ. ಯಾವುದೇ ಸಂಭಾವನೆ ಪಡೆಯದೇ ರಾಯಭಾರಿ ಆಗಿರುವ ಅವರು ಇದೀಗ ಅಧಿಕೃತವಾಗಿ ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅವರು ಈಗ ತಾನೇ ರಾಜ್ಯ ಕೃಷಿ ಇಲಾಖೆ ರಾಯಭಾರಿ ಆಗಿ ಅಧಿಕಾರವನ್ನು ಸ್ವೀಕರಿಸಿದರು. ಆ ಮೂಲಕ ಕೃಷಿ ಇಲಾಖೆಯ ರಾಯಭಾರಿ ಆಗಿ ನಟ ದರ್ಶನ್ ನೇಮಕವಾದರು.
ಮಾಸ್ ನಾಯಕ ದರ್ಶನ್ ಅವರನ್ನು ನೋಡಲು ವಿಕಾಸ ಸೌಧದ ಸಿಬ್ಬಂದಿ ಕೂಡ ಮುಗಿಬಿದ್ದರು. ದರ್ಶನ್ ಅವರನ್ನು ಕಣ್ತುಂಬಿಸಿಕೊಳ್ಳು ಸಲುವಾಗಿ ಆಗಮಿಸಿದವರಿಂದ ವಿಕಾಸ ಸೌಧದ ಸಭಾಂಗಣ ಹೌಸ್ ಫುಲ್ ಆಗಿತ್ತು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ