ಚಕ್ರಾ ಜಲಾಶಯ ಭರ್ತಿಯಾಗಿ ನೀರು ಧುಮ್ಮಿಕ್ಕುತ್ತಿರುವುದು.  
ನ್ಯೂಸ್

ಚಕ್ರಾ ಜಲಾಶಯ ಭರ್ತಿ

ಹೊಸನಗರ: ತಾಲೂಕಿನ ನಗರ ಹೋಬಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಕ್ರಾ ಜಲಾಶಯ ಭರ್ತಿಯಾಗಿದೆ.

ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆಯಿಂದ ಓವರ್‌ಫ್ಲೋ ಆಗುತ್ತಿದ್ದು ಕಣ್ಮನ ಸೆಳೆಯುತ್ತಿದೆ. 579 ಮೀ. ಗರಿಷ್ಠ ಮಟ್ಟದ ಜಲಾಶಯ ಸಂಪೂರ್ಣ ತುಂಬಿದೆ. ಲಿಂಗನಮಕ್ಕಿಗೆ ನೀರು ಹರಿಸುತ್ತಿದ್ದರೂ ಹೆಚ್ಚಿನ ಒಳಹರಿವು ಇರುವ ಕಾರಣ ಓವರ್‌ಫ್ಲೋ ಆಗಿ ಸುಮಾರು 300 ಅಡಿ ಕೆಳಗೆ ಧುಮುಕುವ ದೃಶ್ಯ ನಯನಮನೋಹರವಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆ, ವನ್ಯಸಿರಿಯನ್ನು ಆಕ್ರಮಿಸಿಕೊಂಡಿರುವ ಮೋಡಗಳು, ಸುತ್ತಲೂ ಕಂಡುಬರುವ ಜಲರಾಶಿ ನಡುವೆ ಇಡೀ ಚಕ್ರಾ ಜಲಾಶಯದ ನೋಟ ಚಿತ್ತಾಕರ್ಷಕವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಚಕ್ರಾ-ಸಾವೇಹಕ್ಲು ಜಲಾಶಯಕ್ಕೆ ಹೋಗಲು ಪಾಸ್ ಕಡ್ಡಾಯವಾಗಿದ್ದು, ಮಾಸ್ತಿಕಟ್ಟೆ ಕೆಪಿಸಿ ಕಚೇರಿಯಲ್ಲಿ ನೀಡಲಾಗುತ್ತಿದೆ.