ನ್ಯೂಸ್

ಚೈತ್ರಾ ಕುಂದಾಪುರ ಗ್ಯಾಂಗ್‍ನ ಎ3 ಆರೋಪಿ ಅಭಿನವ ಹಾಲಶ್ರೀ ಅರೆಸ್ಟ್​​

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಅರೆಸ್ಟ್​​ ಆಗಿರುವ ಚೈತ್ರಾ ಕುಂದಾಪುರ ಗ್ಯಾಂಗ್‍ನ ಎ3 ಆರೋಪಿ ಅಭಿನವ ಹಾಲಶ್ರೀಯನ್ನು ಸಿಸಿಬಿ ಒಡಿಸ್ಸಾದ ಕಟಕ್​ನಲ್ಲಿ ಬಂಧಿಸಿದೆ.

ಉದ್ಯಮಿ ಗೋವಿಂದಾ ಬಾಬು ಪೂಜಾರಿಗೆ ಎಂಎಲ್​ಎ ಟಿಕೆಟ್​ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂಡ ಅಂದರ್ ಆಗಿದ್ದೇ ಆಗಿದ್ದು ವಂಚನೆ ಕೇಸ್ ದಿನಕ್ಕೊಂದು, ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ವಿಜಯನಗರದ ಹಾಲಶ್ರೀ ಈ ವಂಚನೆ ಪ್ರಕರಣದ ಮೂರನೇ ಆರೋಪಿಯಾಗಿದ್ದು, ಪ್ರಕರಣದಲ್ಲಿ ಒಂದೂವರೆ ಕೋಟಿ ರೂಪಾಯಿ ಪಡೆದ ಆರೋಪ ಹಾಲಶ್ರೀ ಮೇಲಿದೆ. ಈ ಸ್ವಾಮೀ ಸಹ ಗೋವಿಂದ್​ ಪೂಜಾರಿ ಅವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಸಿಸಿಬಿ ಕಣ್ತಪ್ಪಿಸಿ ಹಾಲಶ್ರೀ ಸ್ವಾಮೀಜಿ ದಿನಕ್ಕೊಂದು ಸ್ಥಳವನ್ನು ಬದಲಾಯಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ಮೊದಲು ಸ್ವಾಮಿಜಿಯ ಕಾರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ಸಿಸಿಬಿ ಕಣ್ತಪ್ಪಿಸಿ ಹಾಲಶ್ರೀ ಸ್ವಾಮೀಜಿ ದಿನಕ್ಕೊಂದು ಸ್ಥಳವನ್ನು ಬದಲಾಯಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ಮೊದಲು ಸ್ವಾಮಿಜಿಯ ಕಾರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು ಎಂದು ತಿಳಿದು ಬಂದಿದೆ. ಸಿಸಿಬಿ ಪೊಲೀಸರು ಸ್ವಾಮಿಜಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಸದ್ಯ ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ.