ನ್ಯೂಸ್

ನನ್ನ ಕೆಲಸದ ಬಗ್ಗೆ ಕಾಮೆಂಟ್​ ಮಾಡಲು ಎಲ್ಲರಿಗೂ ಹಕ್ಕಿದೆ ಆದ್ರೆ…: ನಟಿ ಚೈತ್ರಾ ಜೆ.ಆಚಾರ್​

ಬೆಂಗಳೂರು: ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕನ್ನಡ ಚಿತ್ರರಂಗದ ಯುವ ನಟಿ ಚೈತ್ರಾ ಜೆ.ಆಚಾರ್​, ನೆಗಟಿವ್​ ಕಾಮೆಂಟ್ಸ್​​ಗಳು ಬಂದಾಗ ಅದನ್ನು ಹೇಗೆ ಸ್ವೀಕರಿಸುತ್ತೇನೆ ಎಂಬುದರ ಬಗ್ಗೆ ಈ ರೀತಿ ಹೇಳಿದ್ದಾರೆ.

"ಪ್ರಾರಂಭದಲ್ಲಿ ನನಗೆ ತಿಳಿದಿರಲಿಲ್ಲ ಜನ ಈ ರೀತಿ ನೆಗಟಿವ್​ ಕಾಮೆಂಟ್ಸ್​​ ಮಾಡುತ್ತಾರೆ ಅಂತ! ಯಾಕಂದರೆ ನಾನು ಯಾರಿಗೂ ಆ ತರಹ ಮಾಡಿಲ್ಲ. ಹಾಗಾಗಿ ನನಗೆ ಇದು ಸಂಪೂರ್ಣವಾಗಿ ಹೊಸತು. ಆದ್ರೆ. ಇತ್ತೀಚಿಗೆ ಇದು ಅಭ್ಯಾಸವಾಗುತ್ತಿದೆ. ನನ್ನ ಸ್ನೇಹಿತರು ಅನ್ಯ ಕಲಾವಿದರಿಗೆ ಬಂದಿರುವ ನೆಗಟಿವ್ ಕಾಮೆಂಟ್ಸ್​ ತೋರಿಸಿ, ಇಂತಹ ಅಭಿಪ್ರಾಯಗಳು ಎಲ್ಲರಿಗೂ ಸಾಮಾನ್ಯ ಎಂದು ಹೇಳಿದರು. ನನ್ನ ಕೆಲಸದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಪ್ರತಿಯೊಬ್ಬರಿಗೂ ಹಕ್ಕು ಇದೆ. ಮಾಡಿದ ಕೆಲಸ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ಹೇಳಬಹುದು. ಆದರೆ, ವೈಯಕ್ತಿಕವಾಗಿ ಹೇಳುವುದು ಸರಿಯಲ್ಲ" ಎಂದು ಹೇಳಿದರು.

"ಈಗ ನಾನು ಅದಕ್ಕೆಲ್ಲಾ ಒಗ್ಗುತ್ತಿದ್ದೇನೆ. ಆ ರೀತಿಯ ಕಾಮೆಂಟ್​​ಗಳು ಬಂದಾಗ ಹೆಚ್ಚಾಗಿ ನಿರ್ಲಕ್ಷ್ಯ ಮಾಡುತ್ತೀನಿ ಮತ್ತು ನೆಗಟಿವ್​ ಆಗಿ ಹೇಳುವವರ ಬಗ್ಗೆ ಬೇಸರ ಉಂಟಾಗುತ್ತದೆ" ಎಂದು ಹೇಳಿದರು. ಮತ್ತಷ್ಟು ಕುತೂಹಲಕಾರಿ ವಿಷಯಗಳನ್ನು ಕೆಳಗಿನ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೀಕ್ಷಿಸಲು ಲಿಂಕ್​ ಕ್ಲಿಕ್​ ಮಾಡಿ.