ಬೆಂಗಳೂರು: ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕನ್ನಡ ಚಿತ್ರರಂಗದ ಖ್ಯಾತ ನಟಿ ಚೈತ್ರಾ ಜೆ.ಆಚಾರ್, ತಮ್ಮ ಮುಂದಿನ ಚಿತ್ರ 'ಬ್ಲಿಂಕ್' ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ಬ್ಲಿಂಕ್ ಇದೊಂದು ಸೈನ್ಸ್-ಫಿಕ್ಷನ್ ಚಿತ್ರವಾಗಿದೆ. ಈ ಚಿತ್ರವನ್ನು ಶ್ರೀ ನಿಧಿ ಅವರು ನಿರ್ದೇಶನ ಮಾಡಿದ್ದು, ರವಿಚಂದ್ರನ್ ನಿರ್ಮಿಸಿದ್ದಾರೆ. ಮುಖ್ಯಭೂಮಿಕೆಯಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ನಮ್ಮೊಟ್ಟಿಗೆ ಹಲವು ಕಲಾವಿದರು ಒಟ್ಟುಗೂಡಿದ್ದಾರೆ. ಕನ್ನಡದಲ್ಲಿ ಇಂತ ಚಿತ್ರಗಳು ಮೂಡಿಬರಬೇಕು, ಇದು ಸಿನಿಪ್ರೇಕ್ಷಕರಿಗೆ ಒಂದೊಳ್ಳೆ ಸಂದೇಶ ನೀಡಲಿದೆ ಮತ್ತು ಇಷ್ಟವಾಗಲಿದೆ" ಎಂಬುದು ನನ್ನ ಆಶಯ ಎಂದು ಹೇಳಿದರು.
"ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯಗೊಂಡಿದೆ. ಪ್ರಾಯಶಃ ಈ ವರ್ಷವೇ ಬ್ಲಿಂಕ್ ಬಿಡುಗಡೆಯಾಗುವ ಸಾಧ್ಯತೆಗಳಿದೆ" ಎಂದು ಹೇಳಿದರು. ಮತ್ತಷ್ಟು ವಿಚಾರಗಳನ್ನು ತಿಳಿಯಲು ಈ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.