ಬೆಂಗಳೂರು: ವಿಜಯವಾಣಿ ಸಂದರ್ಶನದಲ್ಲಿ ಮಾತನಾಡಿದ ಕನ್ನಡ ಚಿತ್ರರಂಗದ ನಟಿ ಚೈತ್ರಾ ಜೆ.ಆಚಾರ್, ರಕ್ಷಿತ್ ಶೆಟ್ಟಿ ಅವರ ಫೋಟೋ ಹಾಕಿ ಎಂದು ಫ್ಯಾನ್ಸ್ ನನ್ನ ಕೇಳುತ್ತಾರೆ ಎಂಬ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Priyank Kharge Slams Central Government | ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ
"'ಸಪ್ತಸಾಗರದಾಚೇ ಎಲ್ಲೋ' ಸಿನಿಮಾದ ಚಿತ್ರೀಕರಣದಲ್ಲಿ ರಕ್ಷಿತ್ ಶೆಟ್ಟಿ ಅವರೊಟ್ಟಿಗೆ ನಟನೆ ಮಾಡವುದು ನನಗೆ ಬಹಳ ಸುಲಭವಾಯಿತು. ಸಿಂಪಲ್ ಸ್ಟಾರ್ ಜತೆ ಅಭಿನಯಿಸುವುದಕ್ಕೆ ನನಗಂತೂ ಬಹಳ ಖುಷಿ ನೀಡಿದೆ. ಅವರ ಇನ್ನೊಂದು ಮುಖವನ್ನು ಶೂಟಿಂಗ್ ಸೆಟ್ನಲ್ಲೇ ನೋಡಬೇಕೇ ಹೊರತು ಹೊರಗಡೆ ನೋಡಲು ಸಾಧ್ಯವಿಲ್ಲ. ನನಗೆ ಅಥವಾ ರುಕ್ಮಿಣಿ ವಸಂತ್ ಅವರಿಗೆ ರಕ್ಷಿತ್ ಸರ್ ಫೋಟೋ, ವಿಡಿಯೋಗಳನ್ನು ಹೆಚ್ಚಾಗಿ ಪೋಸ್ಟ್ ಮಾಡಿ ಎಂದು ಅವರ ಫ್ಯಾನ್ಸ್ ಮೆಸೆಂಜ್ ಮಾಡುತ್ತಾರೆ" ಎಂದು ಹೇಳಿದರು.
"ಚಿತ್ರದಲ್ಲಿ ನನ್ನ ಪಾತ್ರದ ಕುರಿತು ಸದ್ಯ ನಾನು ಏನೂ ಹೇಳಲು ಬಯಸುವುದಿಲ್ಲ. ಅದರ ಬಗ್ಗೆ ಮುಂದಿನ ದಿನಗಳಲ್ಲಿ ನಿಮಗೆ ತಿಳಿಯಲಿದೆ" ಎಂದು ಹೇಳಿದರು. ಸಿನಿಮಾದ ಬಗ್ಗೆ ಮತ್ತಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ತಿಳಿಯಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ವೀಕ್ಷಿಸಿ.