ನ್ಯೂಸ್

ಚೈನ್‌ಲಿಂಕ್ ಕಂಪನಿ ವಿರುದ್ಧ ಕೇಸ್; ವಂಚಕರು ಪರಾರಿ

ಬೆಂಗಳೂರು: ಕಡಿಮೆ ಅವಧಿಯಲ್ಲಿ ಶೇ.25 ಲಾಭಾಂಶ ಕೊಡುವುದಾಗಿ ನಂಬಿಸಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಅಕ್ಷಯ ಫಾರ್ಚೂನ್ ಡೆವಲಪರ್ಸ್‌ ಚೈನ್‌ಲಿಂಕ್ ಕಂಪನಿ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.

ಕಂಪನಿ ಮಾಲೀಕ ಜಿ.ವಿ. ಮುನಿರಾಜು ಮತ್ತು ಮೇಲ್ವಿಚಾರಕ ಮಂಜು ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೇಳು ತಿಂಗಳ ಹಿಂದೆ ಚೈನ್‌ಲಿಂಕ್ ಕಂಪನಿ ಶುರು ಮಾಡಿದ ಆರೋಪಿಗಳು, ಮಾಸಿಕ ಶೇ.25 ಲಾಭಾಂಶ ಕೊಡುವುದಾಗಿ ಹಾಗೂ ಇತರ ಹೂಡಿಕೆದಾರರನ್ನು ಕರೆತಂದರೆ 1 ಲಕ್ಷ ರೂ.ಗೆ 5 ಸಾವಿರ ರೂ. ಕಮಿಷನ್ ಕೊಡುವುದಾಗಿ ನಂಬಿಸಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು.

ಈ ಬಗ್ಗೆ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಕಂಪನಿ ಮತ್ತು ವ್ಯಕ್ತಿಗಳಿಂದ ವಂಚನೆಗೆ ಒಳಗಾಗಿದ್ದರೆ ಪೊಲೀಸರಿಗೆ ದೂರು ಕೊಡುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಕೋರಿದ್ದಾರೆ.