ಮುಂಬೈ: ಚಾಹತ್ ಖನ್ನಾ(Chahatt khanna) ತನ್ನ ಎರಡನೇ ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಂಡಿದ್ದರು. ಆದರೆ, ನಂತರ ಪತಿಯಿಂದ ವಿಚ್ಛೇದನ ಪಡೆದಿದ್ದರು. ಇದೀಗ ನಟಿ ಸನಾತನ ಧರ್ಮಕ್ಕೆ ಮರಳಿದ್ದಾರೆ. ಚಾಹತ್ ಖನ್ನಾ ಅವರು ಇಸ್ಲಾಂ ಧರ್ಮವನ್ನು ತ್ಯಜಿಸಲು ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಇಸ್ಲಾಂನಿಂದ ಬಹಳಷ್ಟು ಕಲಿತಿದ್ದೇನೆ. ನಾನು ಎಲ್ಲ ಧರ್ಮಗಳನ್ನು ಸಮಭಾವದಿಂದ ನೋಡುತ್ತೇನೆ. ಆದರೆ ನನ್ನ ಪತಿ ಹಿಂದೂ ದೇವರನ್ನು ಪೂಜಿಸುವುದನ್ನು ನಿಷೇಧಿಸುತ್ತಿದ್ದ ಎಂದು ಹೇಳಿದ್ದಾರೆ.
ಇಸ್ಲಾಂಗೆ ಮತಾಂತರಗೊಳ್ಳಲು ಬ್ರೈನ್ ವಾಶ್ ಆಗಿದ್ದೆ. ಧರ್ಮವನ್ನು ಬದಲಾಯಿಸುವ ಬಗ್ಗೆ, ಅವರು ತುಂಬಾ ಒತ್ತಡ ತಂದರು. ಜನರು ಅವರ ಮಾತುಗಳಿಗೆ ಬಹಳ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಅದಕ್ಕಾಗಿಯೇ ಇದು ಸಂಭವಿಸಿತು. ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಈಗ ನನಗೆ ತಿಳಿದಿದೆ ಎಂದು ಚಾಹತ್ ಹೇಳಿದ್ದಾರೆ.
ಸಾಕ್ಷಿ ತನ್ವರ್ ಮತ್ತು ರಾಮ್ ಕಪೂರ್ ಅಭಿನಯದ ಬಡೇ ಅಚ್ಚೆ ಲಗ್ತೇ ಹೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಚಾಹತ್ ಖನ್ನಾ ತನ್ನ ಜೀವನಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.
ಚಾಹತ್ ಖನ್ನಾ 2006 ರಲ್ಲಿ ಭರತ್ ನರಸಿಂಘನಿ ಅವರನ್ನು ವಿವಾಹವಾಗಿದ್ದು, ಈ ಸಂಬಂಧವು ಕೆಲವೇ ತಿಂಗಳುಗಳಲ್ಲಿ ಕೊನೆಗೊಂಡಿತ್ತು. ಇದಾದ ನಂತರ ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಫರ್ಹಾನ್ ಮಿರ್ಜಾ ಎಂಬಾತನನ್ನು ನಿಖಾಮಾಡಿಕೊಂಡಿದ್ದಳು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಈ ಜೋಡಿ 2018 ರಲ್ಲಿ ವಿಚ್ಛೇದನ ಪಡೆಯಿತು.
ಚಾಹತ್ ಖನ್ನಾ ಪ್ರಸ್ತುತ ಸಂದರ್ಶನವೊಂದರಲ್ಲಿ ತನ್ನ ಮಾಜಿ ಪತಿ ಬಗ್ಗೆ ಕೆಲವು ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. ಇಸ್ಲಾಂ ಸ್ವೀಕರಿಸುವುದರಿಂದ ಹಿಡಿದು ಮಾನಸಿಕ ಕಿರುಕುಳದವರೆಗೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾಳೆ.
ಇಸ್ಲಾಂ ಧರ್ಮ ಬಿಟ್ಟು ಸನಾತನ ಧರ್ಮಕ್ಕೆ ಮರಳಿರುವುದರಿಂದ ತುಂಬಾ ಸಂತೋಷವಾಗಿದೆ. ನಾನು ಎಲ್ಲಾ ಧರ್ಮಗಳನ್ನು ನಂಬುತ್ತೇನೆ. ಮತಾಂಧತೆ ನನಗಿಲ್ಲ. ನಾನು ಮದುವೆಯಾದಾಗ ನಾನು ಇಸ್ಲಾಂ ಧರ್ಮದ ಬಗ್ಗೆ ಕಲಿತೆ. ಅವರ ಬಗ್ಗೆ ಸಾಕಷ್ಟು ಜ್ಞಾನವನ್ನು ಪಡೆದರು. ನನಗೂ ಯೇಸು ಕ್ರಿಸ್ತನಲ್ಲಿ ನಂಬಿಕೆ ಇದೆ. ಆದರೆ ನಾನು ಕಾಳಿ ಭಕ್ತೆ, ಅದೇ ರೀತಿ ಶ್ರೀಕೃಷ್ಣ ಆರಾಧಕಿ ಎಂದು ಹೇಳಿದ್ದಾರೆ.