ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ 2025ರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಶನಿವಾರ ಲಿತಾಂಶ ಪ್ರಕಟಿಸಿದರು.
ಈ ಬಾರಿಯೂ ಟಾಪರ್‌ಗಳ ಪಟ್ಟಿಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಪಠ್ಯಕ್ರಮದ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಮೂವರು ಟಾಪರ್‌ಗಳು ಸಿಬಿಎಸ್‌ಇ ಪಠ್ಯಕ್ರಮದವರಾಗಿದ್ದು, ನಾಲ್ಕು, ಆರು, ಏಳನೇ ಸ್ಥಾನದಲ್ಲಷ್ಟೇ ರಾಜ್ಯ ಪಠ್ಯಕ್ರಮದವರಾಗಿದ್ದಾರೆ. 10 ಟಾಪರ್‌ಗಳಲ್ಲಿ 7 ಜನರು ಸಿಬಿಎಸ್‌ಇ ಸಿಲೆಬಸ್‌ನವರು.
ಪಶುವೈದ್ಯಕೀಯ ಹಾಗೂ ನರ್ಸಿಂಗ್ ವಿಭಾಗದ ಟಾಪರ್‌ಗಳ ಪಟ್ಟಿ ಒಂದೇ ಆಗಿದ್ದು, ಇದರಲ್ಲಿ ಮೂರು, ಆರು ಹಾಗೂ ಹತ್ತನೇ ಸ್ಥಾನ ಪಡೆದವರು ಮಾತ್ರ ರಾಜ್ಯ ಪಠ್ಯಕ್ರಮದವರಾಗಿದ್ದಾರೆ. ಇನ್ನುಳಿದಂತೆ ಅಗ್ರಸ್ಥಾನ ಪಡೆದ ಹರೀಶ್‌ರಾಜ್ ಸೇರಿ ಇತರರು ಸಿಬಿಎಸ್‌ಇ ಪಠ್ಯಕ್ರಮದ ಕಾಲೇಜಿನವರಾಗಿದ್ದಾರೆ.
ಕೃಷಿ ವಿಭಾಗ ಬಾಚಿಕೊಂಡ ಮಂಗಳೂರು:
ಇಂಜಿನಿಯರಿಂಗ್, ಪಶುವೈದ್ಯಕೀಯ, ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್, ನರ್ಸಿಂಗ್ ವಿಭಾಗದ ತಲಾ 10 ಟಾಪರ್‌ಗಳ ಪಟ್ಟಿಯನ್ನು ನೀಡಿದ್ದು, ಹೆಚ್ಚಿನವರು ಬೆಂಗಳೂರು ಹಾಗೂ ಮಂಗಳೂರಿನ ವಿದ್ಯಾರ್ಥಿಗಳಾಗಿದ್ದಾರೆ. ಉಡುಪಿ ಹಾಗೂ ಕಾರ್ಕಳದ ವಿದ್ಯಾರ್ಥಿಗಳು ಕೂಡ ಟಾಪರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೃಷಿ ವಿಭಾಗದಲ್ಲಿ ಮಾತ್ರ ಎಲ್ಲ ಟಾಪರ್‌ಗಳು ರಾಜ್ಯದವರಾಗಿದ್ದು, ವಿಶೇಷವೆಂದರೆ, ಇದರಲ್ಲಿ ಏಳು ಜನರು ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನವರಾಗಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮೂವರು ಅಗ್ರ ಮೂರು ಸ್ಥಾನ ಪಡೆದಿದ್ದಾರೆ.
ಮಾರತ್‌ಹಳ್ಳಿಯ ಶ್ರೀಚೈತನ್ಯ ಟೆಕ್ನೋ ಸ್ಕೂಲ್‌ನ ಭವೇಶ್ ಜಯಂತಿ ಅಗ್ರಸ್ಥಾನ ಪಡೆದಿದ್ದರೆ, ಇದೇ ಶಾಲೆಯ ದಿನೇಶ್ ಗೋಮತಿ ಮೂರನೇ ಸ್ಥಾನ ಗಳಿಸಿದ್ದಾರೆ. ಉತ್ತರಹಳ್ಳಿಯ ಶ್ರೀಚೈತನ್ಯ ಟೆಕ್ನೋ ಸ್ಕೂಲ್‌ನ ಸಾತ್ವಿಕ್ ಬಿ. ಬಿರಾದಾರ್ ಎರಡನೇ ಸ್ಥಾನದಲ್ಲಿದ್ದಾರೆ.
ಪಶುವೈದ್ಯಕೀಯ ಹಾಗೂ ನರ್ಸಿಂಗ್, ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ ಬೆಂಗಳೂರಿನ ಯಲಹಂಕದ ನಾರಾಯಣ ಟೆಕ್ನೋ ಸ್ಕೂಲ್‌ನ ಹರೀಶ್‌ರಾಜ್ ಡಿ.ವಿ. ಟಾಪರ್ ಆಗಿದ್ದಾರೆ. ಇನ್ನು, ಕೃಷಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಅಕ್ಷಯ್ ಎಂ. ಹೆಗಡೆ ಟಾಪರ್ ಎನಿಸಿಕೊಂಡಿದ್ದಾರೆ.
ರ‌್ಯಾಂಕ್ ಅರ್ಹತೆ ನಿಗದಿ:
ಪರೀಕ್ಷೆಗೆ ನೋಂದಾಯಿಸಿದ್ದ 3,30,787 ವಿದ್ಯಾರ್ಥಿಗಳ ಪೈಕಿ 3,11,991 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,75,677 ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಸೀಟು ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ.
ಇಂಜಿನಿಯರಿಂಗ್- 2,62,195, ಪ್ರಕೃತಿ ಹಾಗೂ ಯೋಗ ವಿಜ್ಞಾನ(ಬಿಎನ್‌ವೈಎಸ್)- 1,98,679, ಬಿ.ಎಸ್ಸಿ(ಕೃಷಿ)- 2,14,588, ಪಶುಸಂಗೋಪನೆ- 2,18,282, ಬಿ-ಾರ್ಮ- 2,66,256, ಾರ್ಮ-ಡಿ- 2,66,757, ಬಿ.ಎಸ್ಸಿ ನರ್ಸಿಂಗ್- 2,08,171 ಅರ್ಹತಾ ಅಂಕ ಪಡೆದುಕೊಂಡಿದ್ದಾರೆ.
ಇಂಜಿನಿಯರಿಂಗ್‌ನಲ್ಲಿ ಬೆಂಗಳೂರು ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಭುವೇಶ್ ಜಯಂತಿ ಶೇ.99.06 ಅಂಕಗಳಿಸುವ ಮೂಲಕ ರಾಜ್ಯದ ಮೊದಲ ಟಾಪರ್ ಆಗಿದ್ದಾರೆ. ಪಶುಸಂಗೋಪನೆ- ನಾರಾಯಣ ಇ-ಟೆಕ್ನೋ ಶಾಲೆಯ ವಿದ್ಯಾರ್ಥಿ ಡಿ.ವಿ.ಹರೀಶ್ ರಾಜ್, ಕೃಷಿ- ದಕ್ಷಿಣ ಕನ್ನಡದ ಆಳ್ವಾಸ್ ಪಿಯು ಕಾಲೇಜಿನ ಅಕ್ಷಯ್ ಎಂ.ಹೆಗಡೆ, ಬಿ-ಾರ್ಮ ಮತ್ತು ಾರ್ಮ-ಡಿ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಶಾಲೆಯ ಅತ್ರೇಯ ವೆಂಕಟಾಲಚಂ, ನರ್ಸಿಂಗ್ ಮತ್ತು ಬಿಎನ್‌ವೈಎಸ್‌ನಲ್ಲಿ ಬೆಂಗಳೂರಿನ ನಾರಾಯಣ ಇ-ಟೆಕ್ನೋ ಶಾಲೆಯ ಡಿ.ವಿ. ಹರೀಶ್ ರಾಜ್ ಪ್ರಥಮ ರ‌್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏಳು ವಿಭಾಗದಲ್ಲಿ ಪ್ರಥಮ ಸ್ಥಾನ ಹುಡುಗರ ಪಾಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಕೆ.ಜಿ. ಜಗದೀಶ್, ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಉಪಸ್ಥಿತರಿದ್ದರು.
ಭೌತಶಾಸಕ್ಕೆ ಒಂದು ಕೃಪಾಂಕ
ಭೌತಶಾಸದಲ್ಲಿ ಒಂದು ಪ್ರಶ್ನೆ ತಪ್ಪಾಗಿದ್ದರಿಂದ ಅದಕ್ಕೆ ಕೃಪಾಂಕ ನೀಡಲಾಗಿದೆ. ರಸಾಯನಶಾಸ- ಎರಡು ಪಶ್ನೆಗಳಿಗೆ ಎರಡು ಸರಿ ಉತ್ತರಗಳೆಂದು ಹಾಗೂ ಜೀವಶಾಸಕ್ಕೆ ಒಂದು ಪ್ರಶ್ನೆಗೆ ಎರಡು ಉತ್ತರ ಸರಿ ಎಂದು ಪರಿಗಣಿಸಲಾಗಿದೆ. ಇದು ವಿಷಯ ಪರಿಣತರು ನೀಡಿದ ಸಲಹೆಯಂತೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಏಕೀಕೃತ ಕೌನ್ಸೆಲಿಂಗ್: ಯುಜಿ ನೀಟ್ ಆಧಾರದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ. ಇನ್ನು, ನಾಟಾ-2025 ಅಂಕಗಳ ಆಧಾರದಲ್ಲಿ ಆರ್ಕಿಟೆಕ್ಚರ್ ಸೀಟುಗಳನ್ನು ನೀಡಲಾಗುತ್ತದೆ. ವೈದ್ಯ, ಇಂಜಿನಿಯರಿಂಗ್ ಹಾಗೂ ಇತರೆ ಕೋರ್ಸ್‌ಗಳಿಗೆ ನೀಟ್ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಏಕೀಕೃತ ಕೌನ್ಸೆಲಿಂಗ್ ನಡೆಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.
ಅಂಗವಿಕಲ ಅಭ್ಯರ್ಥಿಗಳ ದಾಖಲೆ ಪರಿಶೀಲನೆಯನ್ನು ಜೂ.3ರಿಂದ 6ರ ವರೆಗೆ ಕೆಇಎ ಕಚೇರಿಯಲ್ಲಿ ನಡೆಸಲಾಗುತ್ತಿದ್ದು, ವೈದ್ಯರು ಖುದ್ದು ಹಾಜರಿದ್ದು ಅರ್ಹತೆಯನ್ನು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದೆ.
ಅಂಕ ದಾಖಲಿಸಲು ಅವಕಾಶ
ಸರಿಯಾಗಿ ನೋಂದಣಿ ಸಂಖ್ಯೆಯನ್ನು ನಮೂದಿಸದ ಕಾರಣದಿಂದ ಸಿಇಟಿ-2025ರ ಲಿತಾಂಶ ಪ್ರಕಟವಾಗದೇ ಇರುವ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ದಾಖಲಿಸಲು ಅವಕಾಶ ನೀಡುವ ಸಲುವಾಗಿ ಮೇ 26ರಿಂದ ಆನ್‌ಲೈನ್ ಲಿಂಕ್ ತೆರೆಯಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಸಿಇಟಿ-2025ರ ಲಿತಾಂಶವನ್ನು ಕೆಇಎ ಶನಿವಾರ ಪ್ರಕಟಿಸಿದ್ದು, ಕೆಲವು ಅಭ್ಯರ್ಥಿಗಳು ಹಿಂದಿನ ವರ್ಷದಲ್ಲಿ 2ನೇ ಪಿಯು / 12ನೇ ತರಗತಿ ಪರೀಕ್ಷೆಗಳಲ್ಲಿ ತಾವು ತೇರ್ಗಡೆಯಾಗಿದ್ದರೂ ಲಿತಾಂಶ ಪ್ರಕಟವಾಗಿಲ್ಲ ಎಂದು ಮನವಿಗಳನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಅವಕಾಶ ನೀಡಲಾಗಿದೆ.
ಸಿಇಟಿ-2025ರ ಲಿತಾಂಶವನ್ನು ಪ್ರಕಟಿಸುವ ಮೊದಲು 2ನೇ ಪಿಯು / 12ನೇ ತರಗತಿ ಅಂಕಗಳನ್ನು ಆಯಾ ಮಂಡಳಿಗಳಿಂದಲೇ ಪಡೆಯಲಾಗುವುದು ಎಂದು ಸೂಚಿಸಲಾಗಿತ್ತು ಮತ್ತು ಅಭ್ಯರ್ಥಿಗಳು ಸರಿಯಾದ ನೋಂದಣಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಎಂದು ಸೂಚಿಸಲಾಗಿತ್ತು. ಆದರೂ ಕೆಲವು ಅಭ್ಯರ್ಥಿಗಳು ನೋಂದಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಿರಲಿಲ್ಲ. ಹೀಗಾಗಿ, ಅಂತಹ ಅಭ್ಯರ್ಥಿಗಳ ಲಿತಾಂಶ ಪ್ರಕಟಿಸಲು ಸಾಧ್ಯವಾಗಿಲ್ಲ. ಇವರು ಸೂಕ್ತ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಸ್ಪಾಟ್ ರ‌್ಯಾಂಕ್ ಪಡೆಯಲು ಅಭ್ಯರ್ಥಿಗಳು ಪ್ರಾಕಾರಕ್ಕೆ ಬರುವ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದಾರೆ.
ಫಲಿತಾಂಶಕ್ಕೂ ಮೊದಲೇ ದಾಖಲಾತಿ ಪರಿಶೀಲನೆ
ಇದೇ ಮೊದಲ ಬಾರಿಗೆ ಲಿತಾಂಶಕ್ಕೂ ಮುನ್ನ ದಾಖಲೆ ಪರಿಶೀಲನೆ ನಡೆಸಲಾಗಿದೆ. ಸ್ಯಾಟ್ಸ್ ಹಾಗೂ ಆರ್‌ಡಿ ದತ್ತಾಂಶದ ಆಧಾರದಲ್ಲಿ ಆನ್‌ಲೈನ್‌ನಲ್ಲಿ ಪರಿಶೀಲನೆ ಆಗಿದೆ. ಈ ದಾಖಲೆಗಳನ್ನು ಆಯಾ ಕಾಲೇಜು ಹಂತದಲ್ಲೇ ತಪಾಸಣೆ ನಡೆಸಲಾಗಿದೆ. ವಿವಿಧ ಕ್ಲೇಮ್ ಹಾಗೂ ಮೀಸಲಾತಿ ಬಯಸಿದ ಅಭ್ಯರ್ಥಿಗಳ ದಾಖಲೆಗಳನ್ನು ಕೆಇಎ ಕಚೇರಿಯಲ್ಲಿ ನಡೆಸಲಾಗಿದೆ ಎಂದು ತಿಳಿಸಲಾಗಿದೆ. ಒಟ್ಟಾರೆ 3 ಲಕ್ಷ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ಈಗಾಗಲೇ ಮುಗಿದಿದ್ದು, ಆಪ್ಷನ್ ಎಂಟ್ರಿಗೆ ದತ್ತಾಂಶ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಕೆಇಎ ತಿಳಿಸಿದೆ.
ಕಾಲ್ ಸೆಂಟರ್ ಉನ್ನತೀಕರಣ
ಪ್ರಾಧಿಕಾರದ ಕಾಲ್ ಸೆಂಟರ್‌ಗೆ 10 ಲೈನ್‌ಗಳನ್ನು ಅಳವಡಿಸಿ ಪ್ರತಿ ದಿನ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಪ್ರಶ್ನೆಗಳಿಗೆ ಉತ್ತರಿಸಲು, ಮಾಹಿತಿ ನೀಡಲು ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ ವಾರದ ಎಲ್ಲ ದಿನಗಳಲ್ಲೂ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಕುಸಿದ ಇಂಜಿನಿಯರಿಂಗ್ ರ‌್ಯಾಂಕ್
2024ರಲ್ಲಿ ಸಿಇಟಿಯಲ್ಲಿ 2.74 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್‌ನಲ್ಲಿ ಅರ್ಹತೆ ಪಡೆದಿದ್ದರು. ಈ ವರ್ಷ 2.62 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 12 ಸಾವಿರ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ. ಇದಕ್ಕೆ ಕಾರಣವೇನೆಂದು ಸಚಿವರನ್ನು ಪ್ರಶ್ನಿಸಿದಾಗ, ಈ ವರ್ಷ ಪಿಯು ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರುವ ಪ್ರಮಾಣ ಕಡಿಮೆಯಾಗಿರುವುದರಿಂದ ಇಂಜಿನಿಯರಿಂಗ್ ಅರ್ಹತೆ ಕ್ಷೀಣಿಸಲು ಕಾರಣವೆಂದು ಸಚಿವರು ತಿಳಿಸಿದ್ದಾರೆ.
2 ಲಕ್ಷ ರ‌್ಯಾಂಕ್ ಪಡೆದ ಜನಿವಾರ ವಿದ್ಯಾರ್ಥಿ
ಬೀದರ್‌ನಲ್ಲಿ ಜನಿವಾರ ತೆಗೆಯಬೇಕೆಂದು ಪರೀಕ್ಷೆಗೆ ಗೈರು ಹಾಜರಾಗಿದ್ದ ಬೀದರ್ ವಿದ್ಯಾರ್ಥಿ ಸಚಿವ್ರತ ಕುಲಕರ್ಣಿ ಇಂಜಿನಿಯರಿಂಗ್‌ನಲ್ಲಿ 2.06 ಲಕ್ಷದ ರ‌್ಯಾಂಕ್ ಪಡೆದಿದ್ದಾರೆ. ಮೂರು ವಿಷಯದ ಪರೀಕ್ಷೆಗೆ ಹಾಜರಾಗಿ ಗಣಿತ ವಿಷಯಕ್ಕೆ ಗೈರು ಹಾಜರಾಗಿದ್ದರು. ವಿದ್ಯಾರ್ಥಿಯ ಅನುಮತಿಯ ಆಧಾರದ ಮೇಲೆ 3 ವಿಷಯಗಳಲ್ಲಿ ತೆಗೆದಿದ್ದ ಅಂಕಗಳನ್ನು ಪರಿಗಣಿಸಿ ಗಣಿತ ವಿಷಯಕ್ಕೆ ಸಮೀಕರಿಸಿ ರ‌್ಯಾಂಕ್ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಉತ್ತರಪತ್ರಿಕೆ ಅಪ್‌ಲೋಡ್
ಪರೀಕ್ಷೆ ಮುಗಿದ ಬಳಿಕ ಎಲ್ಲ ವಿದ್ಯಾರ್ಥಿಗಳ, ಎಲ್ಲ ವಿಷಯಗಳ ಉತ್ತರಪತ್ರಿಕೆ (ಒಎಂಆರ್ ಶೀಟ್) ಸಾರ್ವಜನಿಕ ವೀಕ್ಷಣೆಗೆ ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಇದು ವಿನೂತನ ಕ್ರಮವಾಗಿದೆ ಎಂದು ಸಚಿವರು ಹೇಳಿದರು.
10 ಸಾವಿರ ವಿದ್ಯಾರ್ಥಿಗಳಿಂದ ತಪ್ಪು
ಈ ಬಾರಿ ಮಾದರಿ ಉತ್ತರಪತ್ರಿಕೆಗಳನ್ನು ನೀಡಿ ಅಭ್ಯಾಸ ಮಾಡಿಸಿದ್ದರ ಹೊರತಾಗಿಯೂ ಅಂದಾಜು 10 ಸಾವಿರ ವಿದ್ಯಾರ್ಥಿಗಳು ತಮ್ಮ ನೋಂದಣಿ/ ರೋಲ್ ನಂಬರ್ ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಇದರಿಂದಾಗಿ ಲಿತಾಂಶ ಪ್ರಕಟಣೆಯಲ್ಲಿ 4-5 ವಿಳಂಬವಾಯಿತು ಎಂದು ಪ್ರಾಧಿಕಾರ ತಿಳಿಸಿದೆ. ಹೊರ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ಅಂಕ ನಮೂದಿಸಲು ಲಿಂಕ್ ನೀಡಲಾಗಿತ್ತು. ಅವರ ಅಂಕಪಟ್ಟಿ ಹಾಗೂ ನಮೂದಿಸಿದ ಅಂಕಗಳನ್ನು ಪರಿಶೀಲಿಸಿ ರ‌್ಯಾಂಕ್ ನೀಡಲಾಗಿದೆ.
ವಿಷಯವಾರು ಹಾಜರಾತಿ
ಭೌತಶಾಸ: 3,11,690
ರಸಾಯನಶಾಸ: 3,11,767
ಗಣಿತ: 3,04,170
ಜೀವಶಾಸ: 2,39,459ಸಿಇಟಿ ಸುಧಾರಣೆ
- 11 ಲಕ್ಷ ಒಎಂಆರ್ ಶೀಟ್‌ಗಳ ಅಪ್‌ಲೋಡ್
- ಎಐ ಆಧಾರಿತ ಪರೀಕ್ಷೆ ನೋಂದಣಿ
- ಪಿಯು ವಿದ್ಯಾರ್ಥಿಗಳ ಅಂಕ ನೇರವಾಗಿ ಸ್ವೀಕೃತ
- ಕಾಲ್ ಸೆಂಟರ್ ಉನ್ನತೀಕರಣ