ನ್ಯೂಸ್

ಸಿಇಟಿ ಕೃಷಿ ಕೋಟಾ ಪ್ರಾಯೋಗಿಕ ಪರೀಕ್ಷೆ: ಮೇ 9ಕ್ಕೆ ಮುಂದೂಡಿಕೆ

ಬೆಂಗಳೂರು: ಸಿಇಟ ಕೃಷಿ ಕೋಟಾ ಪ್ರಾಯೋಗಿಕ ಪರೀಕ್ಷೆ-2025ರ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಏ.29ರಂದು ನಿಗದಿ ಮಾಡಿದ್ದ ಪ್ರಾಯೋಗಿಕ ಪರೀಕ್ಷೆಯನ್ನು ಮೇ 9ಕ್ಕೆ ಮುಂದೂಡಲಾಗಿದೆ.

ದಾಖಲಾತಿಗಳನ್ನು ಸಲ್ಲಿಸಲು ಏ.21 ಕೊನೆಯ ದಿನವಾಗಿದೆ. ದಾಖಲಾತಿ ಪರಿಶೀಲನೆಗೆ ಏ.23ರ ಸಂಜೆ 5 ಗಂಟೆ ಕೊನೆಯ ದಿನವಾಗಿದೆ. ಅರ್ಹ ಮತ್ತು ಅನರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಏ.25ರಂದು ಸಂಜೆ 4 ಗಂಟೆಗೆ ಪ್ರಕಟಿಸಲಿದೆ. ವಿದ್ಯಾರ್ಥಿಗಳು ಸಂಬಂಧಪಟ್ಟ ವಿಶ್ವವಿದ್ಯಾಲಯದಿಂದ ದಾಖಲಾತಿಗಳ ಸ್ಪಷ್ಟನೆಗೆ ಏ.27ರರ ಸಂಜೆ ಕೊನೆಯ ದಿನವಾಗಿದೆ. ಏ.28ರ ಸಂಜೆ 4 ಗಂಟೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ೋಷಿಸಲಾಗುತ್ತದೆ.

ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮೇ 1ರಿಂದ 5ರವರೆಗೆ ಸಮಯ ನೀಡಲಾಗಿದೆ. ಮೇ 9ರಂದು ಬೆಳಗ್ಗೆ 9 ಗಂಟೆಗೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಕೀ ಉತ್ತರಗಳನ್ನು ಪ್ರಕಟಿಸಲಾಗುತ್ತದೆ. ಮೇ 12ರಂದು ಪ್ರಾಯೋಗಿಕ ಪರೀಕ್ಷೆ ಲಿತಾಂಶ ಪ್ರಕಟಿಸಲಾಗುತ್ತದೆ. ಕೆಇಎಗೆ ಅಂಕಗಳನ್ನು ಸಲ್ಲಿಸಲು ಮೇ 15 ಕೊನೆಯ ದಿನವಾಗಿದೆ.