ನ್ಯೂಸ್

ಅನ್ಯ ಕಾರ್ಯಕ್ಕೆ ಜಿಎಸ್​ಟಿ ಸೆಸ್: ರಾಜ್ಯಗಳಿಗೆ ಸೇರಬೇಕಾದ ಮೊತ್ತ ಸಂಚಿತ ನಿಧಿಗೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಲ್ಲಿನ (ಜಿಎಸ್​ಟಿ) ಪರಿಹಾರದ ಮೇಲ್ತೆರಿಗೆಯನ್ನು (ಸೆಸ್) ಕೇಂದ್ರ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದು, 2017-18 ಮತ್ತು 2018-19ರಲ್ಲಿ -ಠಿ; 47,272 ಕೋಟಿಯನ್ನು ನಿಯಮಬಾಹಿರವಾಗಿ ದೇಶದ ಸಂಚಿತ ನಿಧಿಗೆ (ಸಿಎಫ್​ಐ) ವರ್ಗಾಯಿಸಿಕೊಂಡಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ಈ ಎರಡೂ ಆರ್ಥಿಕ ಸಾಲಿನ ವಿತ್ತೀಯ ಕೊರತೆ ಕುರಿತ ಲೆಕ್ಕಪತ್ರದ 8, 9 ಮತ್ತು 13ನೇ ಸ್ಟೇಟ್​ವೆುಂಟ್ಸ್ ಪರಿಶೀಲನೆ ವೇಳೆ ಸೆಸ್ ಮೂಲಕ ಸಂಗ್ರಹಿಸಿದ ಮೊತ್ತ ಕಡಿಮೆ ಉಲ್ಲೇಖವಾಗಿರುವುದು ಬೆಳಕಿಗೆ ಬಂದಿದೆ. ಇದನ್ನು ಕೂಲಕಂಷವಾಗಿ ಪರಿಶೀಲಿಸಿದಾಗ ಈ ಬಾಬ್ತಿನ ಹಣವನ್ನು ಬೇರೆ ಉದ್ದೇಶಕ್ಕೆ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ. ಇದು ಜಿಎಸ್​ಟಿ ಪರಿಹಾರ ಸೆಸ್ ಕಾಯ್ದೆ-2017ರ ಉಲ್ಲಂಘನೆ ಎಂದು ಮುಂಗಾರು ಅಧಿವೇಶನದ ಕಡೆಯ ದಿನ (ಬುಧವಾರ) ಮಂಡಿಸಲಾದ ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ.

2017-18ರಲ್ಲಿ -ಠಿ; 62,612 ಕೋಟಿ ಜಿಎಸ್​ಟಿ ಪರಿಹಾರದ ಸೆಸ್ ಆಕರವಾಗಿತ್ತು. ಆದರೆ, ನಾನ್-ಲ್ಯಾಪ್ಸ್​ಬಲ್ ಫಂಡ್​ಗೆ ವರ್ಗಾವಣೆ ಆಗಿದ್ದು, -ಠಿ; 56,146 ಕೋಟಿ (-ಠಿ; 6,466 ಕೋಟಿ ಬಾಕಿ) 2018-19ರಲ್ಲಿ -ಠಿ; 95,081 ಕೋಟಿ ಜಿಎಸ್​ಟಿ ಪರಿಹಾರ ಸೆಸ್ ಸಂಗ್ರಹವಾಗಿತ್ತು. ಇದರಲ್ಲಿ -ಠಿ; 54,275 ಕೋಟಿಯನ್ನಷ್ಟೆ ನಾನ್-ಲ್ಯಾಪ್ಸ್​ಬಲ್ ಫಂಡ್​ಗೆ ವರ್ಗಾಯಿಸಿತು (-ಠಿ; 40,806 ಕೋಟಿ ಬಾಕಿ). -ಠಿ; 54,275 ಕೋಟಿ ವರ್ಗಾವಣೆ ಆಗುವುದಕ್ಕೂ ಮುನ್ನ ಫಂಡ್​ನಲ್ಲಿ -ಠಿ; 15 ಸಾವಿರ ಕೋಟಿ ಇತ್ತು. ಇವೆರಡೂ ಮೊತ್ತದಲ್ಲಿ -ಠಿ; 69,275 ಕೋಟಿಯನ್ನು ಕೇಂದ್ರ ಸರ್ಕಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿತು. ಈ ಮೂಲಕ ಕೇಂದ್ರ ಸರ್ಕಾರ -ಠಿ; 35,725 ಕೋಟಿಯನ್ನು ಉಳಿಸಿಕೊಂಡಿತು. ಇದೇ ಸಾಲಿನ ಬಜೆಟ್​ನಲ್ಲಿ ರಾಜ್ಯಗಳಿಗೆ ಪರಿಹಾರ ವಿತರಿಸಲು ಮೀಸಲು ಇರಿಸಿದ್ದ -ಠಿ; 90 ಸಾವಿರ ಕೋಟಿಯಲ್ಲೂ -ಠಿ; 20,725 ಕೋಟಿಯನ್ನು ಕೇಂದ್ರ ಮಿಗತೆ ಮಾಡಿಕೊಂಡಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

ನಿಧಿಗೆ ವರ್ಗಾವಣೆ ಆಗದ ಸೆಸ್​ಗಳು:

  • ಕಚ್ಚಾ ತೈಲದ ಮೇಲೆ ವಿಧಿಸುವ ರಸ್ತೆ ಮತ್ತು ಮೂಲಸೌಕರ್ಯ ಸೆಸ್
  • ಸಾರ್ವತ್ರಿಕ ಸೇವಾ ಲೇವಿ ್ಝ ರಾಷ್ಟ್ರೀಯ ಖನಿಜ ಟ್ರಸ್ಟ್ ಲೇವಿ

ಸಿಎಜಿ ವರದಿ ಮುಖ್ಯಾಂಶ:

  • ಜಿಎಸ್​ಟಿ ಪರಿಹಾರದ ಸೆಸ್​ನ್ನು ಹಣಕಾಸು ಸೇವಾ ಶೀರ್ಷಿಕೆಗೆ ವರ್ಗಾಯಿಸಬೇಕು.
  • ಆದರೆ, ಹಣಕಾಸು ಸಚಿವಾಲಯ ಈ ಬಾಬ್ತನ್ನು ರಾಜ್ಯಗಳಿಗೆ ಮಂಜೂರು ಮಾಡುವ ನೆರವಿನ ಅನುದಾನದ ಶೀರ್ಷಿಕೆ ವರ್ಗಾಯಿಸಿದೆ.
  • ಜಿಎಸ್​ಟಿ ಪರಿಹಾರದ ಸೆಸ್ ರಾಜ್ಯ ಸರ್ಕಾರಗಳ ಹಕ್ಕಾಗಿದೆಯೇ ಹೊರತು ಇದು ಕೇಂದ್ರ ನೀಡುವ ಅನುದಾನವಲ್ಲ.
  • ಹಣಕಾಸು ಸಚಿವಾಲಯವು ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು.

ವಿತ್ತೀಯ ಕೊರತೆ ಗೊಂದಲಕಾರಿ

2018-19ರಲ್ಲಿ ಒಟ್ಟಾರೆ -ಠಿ; 2,74,592 ಕೋಟಿಯನ್ನು 35 ವಿವಿಧ ರೀತಿಯ ಸೆಸ್, ಲೇವಿ ಹಾಗೂ ಇನ್ನಿತರ ಶೀರ್ಷಿಕೆಯಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸಿದೆ. ಇದರಲ್ಲಿ -ಠಿ; 1,64,322 ಕೋಟಿಯನ್ನು ಮಾತ್ರ ಆಯಾ ಉದ್ದೇಶಗಳಿಗೆ ರಚಿಸಲಾಗಿರುವ ಮೀಸಲು ನಿಧಿಗಳಿಗೆ ವರ್ಗಾಯಿಸಿದೆ. ಬಾಕಿ ಮೊತ್ತವು ಸಿಎಫ್​ಐನಲ್ಲೇ ಉಳಿದಿದೆ. ಹಣಕಾಸು ಸಚಿವಾಲಯದ ಈ ವೈಫಲ್ಯದ ಕಾರಣ ವಿತ್ತೀಯ ಕೊರತೆಯು ಗೊಂದಲಕಾರಿ ಆಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಿದೆ.

ಇಕ್ಕಟ್ಟಿಗೆ ಸಿಲುಕಿದ ಕೇಂದ್ರ

ಜಿಎಸ್​ಟಿ ಜಾರಿಯಾದ ನಂತರ ರಾಜ್ಯಗಳಿಗೆ ಉಂಟಾಗಿರುವ ನಷ್ಟವನ್ನು ಕೇಂದ್ರ ಸರ್ಕಾರ ಸಿಎಫ್​ಐನಿಂದ ಭರಿಸಿಕೊಡಬೇಕು ಎಂಬುದು ಯಾವ ನಿಯಮದಲ್ಲೂ ಇಲ್ಲ ಎಂಬ ಅಟಾರ್ನಿ ಜನರಲ್​ರ ಅಭಿಪ್ರಾಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಉಲ್ಲೇಖಿಸಿದ್ದರು. ಜಿಎಸ್​ಟಿ ಪರಿಹಾರ ಪಾವತಿಸಲು ನಿರಾಕರಿಸಿ ನಷ್ಟ ಸರಿದೂಗಿಸಲು ಸಾಲ ಪಡೆಯುವ ಎರಡು ಆಯ್ಕೆಗಳನ್ನು ನೀಡಿದರು. ಈಗ ಜಿಎಸ್​ಟಿ ಪರಿಹಾರದ ಸೆಸ್​ನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಒಪ್ಪಿಕೊಂಡ ಹಣಕಾಸು ಸಚಿವಾಲಯ

ಸಿಎಜಿ ಆಕ್ಷೇಪವನ್ನು ಹಣಕಾಸು ಸಚಿವಾಲಯ ಒಪ್ಪಿಕೊಂಡಿದ್ದು, ಸಾರ್ವಜನಿಕ ನಿಧಿಗೆ ವರ್ಗಾಯಿಸಬೇಕಾದ ಹಣವನ್ನು ಮುಂದಿನ ಸಾಲಿನಲ್ಲಿ ವರ್ಗಾಯಿಸಲಾಗುವುದು ಎಂದು ಹೇಳಿದೆ.

ನಿಯಮದಲ್ಲೇನಿದೆ?

ಜಿಎಸ್​ಟಿ ಪರಿಹಾರ ಸೆಸ್ ಕಾಯ್ದೆ ಅನ್ವಯ ಈ ಬಾಬ್ತಿನಲ್ಲಿ ಸಂಗ್ರಹವಾದ ಅಷ್ಟೂ ಮೊತ್ತವನ್ನು ನಾನ್-ಲ್ಯಾಪ್ಸ್​ಬಲ್ ಫಂಡ್​ನಲ್ಲಿ (ಜಿಎಸ್​ಟಿ ಪರಿಹಾರಿ ಸೆಸ್ ನಿಧಿ) ಇರಿಸಬೇಕು. ಇದು ಸಾರ್ವಜನಿಕ ಲೆಕ್ಕಪತ್ರದ ಭಾಗವೂ ಆಗಿರುತ್ತದೆ. ತೆರಿಗೆ ನಷ್ಟ ಅನುಭವಿಸುವ ರಾಜ್ಯಗಳಿಗೆ ಈ ನಿಧಿಯಿಂದ ಪರಿಹಾರ ಒದಗಿಸುವುದು ಇದರ ಉದ್ದೇಶ. ಸಂಗ್ರಹವಾಗುವ ಜಿಎಸ್​ಟಿಯ ವಾರ್ಷಿಕ ಪ್ರಗತಿಯಲ್ಲಿ ಶೇ. 14ಕ್ಕೆ ಅನುಗುಣವಾದ ಪರಿಹಾರ ಮೊತ್ತವನ್ನು ಐದು ವರ್ಷದ ಕಾಲ ಎಲ್ಲ ರಾಜ್ಯ ಸರ್ಕಾರಗಳಿಗೂ ಜಿಎಸ್​ಟಿ ಪರಿಹಾರದ ಸೆಸ್ ಕಾಯ್ದೆ ಖಾತರಿ ಪಡಿಸಿದೆ. ಯಾವ ರಾಜ್ಯ ಶೇ. 14ರ ತೆರಿಗೆ ಆದಾಯದ ಬೆಳವಣಿಗೆ ಕಾಣುವುದಿಲ್ಲವೂ ಅಂಥ ರಾಜ್ಯಗಳು ಕೇಂದ್ರದಿಂದ ಪರಿಹಾರ ಪಡೆಯಲು ಅರ್ಹವಾಗಿರುತ್ತವೆ ಮತ್ತು ಇದನ್ನು ದ್ವೈಮಾಸಿಕವಾಗಿ ಕೇಂದ್ರ ಸರ್ಕಾರ ಹಂಚಿಕೆ ಮಾಡಬೇಕು.