ನ್ಯೂಸ್

ಅಗ್ನಿಪಥ ನೇಮಕಾತಿಗೆ ಅಧಿಸೂಚನೆ ಪ್ರಕಟ: ಜುಲೈನಲ್ಲಿ ನೋಂದಣಿ ಆರಂಭ

mahalakshmihm

ನವದೆಹಲಿ: ಅಗ್ನಿಪಥ ಯೋಜನೆಯಡಿ ನೇಮಕಾತಿ ನಡೆಸಲು ಭಾರತೀಯ ಸೇನೆ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಜುಲೈನಲ್ಲಿ ಆನ್​ಲೈನ್​ ನೋಂದಣಿ ಆರಂಭವಾಗಲಿದೆ ಎಂದು ತಿಳಿಸಿದೆ.

ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಅಗ್ನಿಪಥ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ನಿನ್ನೆಯಷ್ಟೇ ಸೇನಾ ಮುಖ್ಯಸ್ಥರು ಹೇಳಿಕೆ ನೀಡಿದ್ದರು. ಒಂದು ದಿನದ ಬೆನ್ನಲ್ಲೇ ಇದೀಗ ಅಧಿಸೂಚನೆ ಪ್ರಕಟಿಸಲಾಗಿದೆ.

ಯೋಜನೆ ವಿರೋಧಿಸಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಧಕ್ಕೆ ತಂದಿರುವವರನ್ನು ಆಯ್ಕೆಯಿಂದ ಹೊರಗಿಡಲಾಗುವುದು ಎಂದೂ ಕೂಡ ಹೇಳಿದ್ದರು. ಇದೀಗ ಅಧಿಸೂಚನೆಯಂತೆ ಜುಲೈ ತಿಂಗಳಲ್ಲೇ ನೋಂದಣಿ ಪ್ರಾರಂಭವಾಗಲಿದೆ.

ಹೊಸ ಮಾದರಿಯ ಸೇನಾ ನೇಮಕಾತಿಯಲ್ಲಿ ಉದ್ಯೋಗ ಆಕಾಂಕ್ಷಿಗಳು ವೆಬ್​ಸೈಟ್​​​ನಲ್ಲಿ ಆನ್​ಲೈನ್​ ನೋಂದಣಿ ಕಡ್ಡಾಯವಾಗಿದೆ. ಸೇನೆಯಲ್ಲಿ ಅಗ್ನಿವೀರರ ವಿಶಿಷ್ಟ ಶ್ರೇಣಿಯನ್ನು ರೂಪಿಸಲಾಗುವುದು, ಇದು ಈಗಿರುವ ಇತರೆ ಶ್ರೇಣಿಗಳಿಗಿಂತ ಭಿನ್ನವಾಗಿರುತ್ತದೆ ಎಂದು ಸೇನೆ ತಿಳಿಸಿದೆ. (ಏಜೆನ್ಸೀಸ್​)