ನ್ಯೂಸ್

ದೇಶವಿರೋಧಿ ಚಟುವಟಿಕೆಗಳಲ್ಲಿ ಕಾಂಗ್ರೆಸ್​ ಕೈವಾಡವಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಧಾರವಾಡ: ಎರಡ್ಮೂರು ರಾಜ್ಯಕ್ಕೆ ಮಾತ್ರ ಕಾಂಗ್ರೆಸ್ ಸಿಮೀತವಾಗಿರುವುದರಿಂದ ತನ್ನ ಅಸ್ತಿತ್ವ ಕಳೆದುಕೊಂಡಿದ್ದಲ್ಲದೇ, ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅನಾವಶ್ಯಕವಾಗಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ದೇಶ ವಿರೋಧ ಚಟುವಟಿಕೆಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ, ಇದಕ್ಕೆ ಪುಷ್ಟಿ ನೀಡುವಂತೆ ಕಾಶ್ಮೀರ ಗಲಭೆಯಿಂದ ಹಿಡಿದು ಇಂದಿನ ಹಿಂಸಾಚಾರಗಳೇ ಸಾಕ್ಷಿ ಎಂದರುಅನ್ನೋ ಸುದ್ದಿ ಬರುತ್ತಿದೆ

ಕಾಶ್ಮೀರ ಗಲಭೆ ಇರಬಹುದು, ಪಾಕ್​ಗೆ ಹೋಗಿ ಪಾಕ್‌ಗೆ ಹೋಗಿ ಕೈ ನಾಯಕರು ಹೇಳಿಕೆ ನೀಡಿರೋದು ಇರಬಹುದು, ಚೀನಾಕ್ಕೆ ಹೋಗಿ ಅಲ್ಲಿನ ಮುಖಂಡರ ಜೊತೆಗಿನ ಮಾತುಕತೆ, ಇಲ್ಲಿರುವ ದೇಶ ವಿರೋಧಿ ಸಂಘಟನೆಗಳ ಜೊತೆ ಅವರ ಸಂಪರ್ಕ ಇರುವುದು ಇವೆಲ್ಲವೂ ದೇಶದಲ್ಲಿ ಅಸ್ಥಿರತೆ ಉಂಟುಮಾಡುವ ಹುನ್ನಾರ ಎಂದು ಹೇಳಿದ್ದಾರೆ.

ದೇಶಾದ್ಯಂತ ಈಗ ಗಲಭೆ ಶುರುವಾಗಿದೆ.ಇದೆಲ್ಲದರ ಹಿಂದೆ ಷಡ್ಯಂತ್ರ ಇದ್ದು, ಸಾರ್ವಜನಿಕ ಆಸ್ತಿ ಹಾಳು ಮಾಡಲು ಯಾರಿಗೂ ಅಧಿಕಾರ ಇಲ್ಲ.ವಿರೋಧ ಪಕ್ಷಗಳು ವಿರೋಧ ಪಕ್ಷದ ಕೆಲಸ ಮಾಡಲು ಅವಕಾಶವಿದೆ.ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಅವಕಾಶವಿದೆ.ಅದನ್ನು ಬಿಟ್ಟು ಕಾನೂನು ಕೈ ತಗೊಂಡ್ರೆ ಅದೇ ಕಾನೂನು ದಂಡಿಸುತ್ತೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)