ನ್ಯೂಸ್

ರೈತರಿಗೆ ಕೇಂದ್ರದ ನೆರವು

ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ಕೃಷಿ ಸಾಲಗಳಲ್ಲಿ ಶೇ.5 ನೆರವು ಘೋಷಿಸಿದೆ. ಆದರೆ ಇದು ಮಾರ್ಚ್ 1ರಿಂದ ಮೇ 31ರ ನಡುವೆ ಪಡೆದ -ಠಿ; 3 ಲಕ್ಷವರೆಗಿನ ಕೃಷಿ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.

ರೈತರ ಸಾಲದ ಮೇಲಿನ ಬಡ್ಡಿಗೆ ಶೇ.2ರಷ್ಟು ನೆರವನ್ನು ನೇರವಾಗಿ ಬ್ಯಾಂಕ್​ಗಳಿಗೆ ವರ್ಗಾವಣೆ ಮಾಡುತ್ತದೆ. ಜತೆಗೆ ಮೇ.31ರವರೆಗೆ ರೈತರಿಗೆ ಸಾಲ ಮರುಪಾವತಿಗೆ ಅನುಕೂಲವಾಗುವಂತೆ ತ್ವರಿತ ಮರುಪಾವತಿ ಪ್ರೋತ್ಸಾಹಕವಾಗಿ (ಪಿಆರ್​ಐ) ಶೇ. 3ರಷ್ಟು ಧನಸಹಾಯವನ್ನು ರೈತರಿಗೆ ಒದಗಿಸುತ್ತದೆ. ಈ ಯೋಜನೆ ಮೇ 31ರವರೆಗೆ ಇರುತ್ತದೆೆ.