ನವದೆಹಲಿ: ಕೋವಿಡ್ ಸಾಂಕ್ರಾಮಿಕತೆಯಿಂದ ಅಸ್ತವ್ಯಸ್ತ ಗೊಂಡಿರುವ ಶೈಕ್ಷಣಿಕ ವಲಯವನ್ನು ಹಳಿಗೆ ತರಲು ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಿದ್ದು, ಮನೆಯಿಂದಲೇ ಕಲಿಕೆ ಪ್ರಕ್ರಿಯೆಗೆ ಅಗತ್ಯವಾದ ಮಾರ್ಗಸೂಚಿಗಳನ್ನು ಶನಿವಾರ ಬಿಡುಗಡೆ ಮಾಡಿದೆ. ಸಾಂಕ್ರಾಮಿಕತೆಯಿಂದಾಗಿ ಶೈಕ್ಷಣಿಕ ಸಂಸ್ಥೆಗಳು ಮುಚ್ಚಿದ್ದು ಬಹುತೇಕ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಪಾಲಕರು ಮಕ್ಕಳ ಕಲಿಕೆಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಈ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಪೋಷಕರು ಮಕ್ಕಳಿಗಾಗಿ ಸುರತ, ಒಳಗೊಳ್ಳ್ಳುವ ಹಾಗೂ ಧನಾತ್ಮಕ ಕಲಿಕಾ ಪರಿಸರವನ್ನು ಸೃಷ್ಟಿಸಲು ಮಾರ್ಗಸೂಚಿ ಒತ್ತು ನೀಡಿದೆ. ಮಕ್ಕಳಿಂದ ವಾಸ್ತವ ನೆಲೆಗಟ್ಟಿನಲ್ಲಿ ಮಾತ್ರವೇ ನಿರೀೆ ಇಟ್ಟು ಕೊಳ್ಳಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಆರೋಗ್ಯಕರ ಆಹಾರ ಒದಗಿಸಿ. ಮನರಂಜನೆಯೂ ಇರಲಿ ಎಂದು ಅದು ತಿಳಿಸಿದೆ. ಮಕ್ಕಳ ಕಲಿಕೆ ಪ್ರಕ್ರಿಯೆಯಲ್ಲಿ ಪಾಲಕರ ಭಾಗವಹಿಸುವಿಕೆಗೆ ಒತ್ತು ನೀಡಬೇಕಿದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ. "ಮನೆಯೇ ಮೊದಲ ಪಾಠಶಾಲೆ ಹಾಗೂ ಹೆತ್ತವರೇ ಮೊದಲ ಗುರುಗಳು ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ. ಮಕ್ಕಳ ಬೆಳವಣಿಗೆ ಹಾಗೂ ಕಲಿಕೆಯಲ್ಲಿ ಹೆತ್ತವರ ಪಾತ್ರ ಮಹತ್ವದ್ದು' ಎಂದು ಅವರು ಟ್ವೀಟ್ ಮಾಡಿದ್ದಾರೆ.
2ನೇ ಡೋಸ್ ಲಸಿಕೆಗೆ ಪರದಾಟ
ಸುಮಾರು 40 ದೇಶಗಳು ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲಾಗದೆ ಅಸಹಾಯಕ ಸ್ಥಿತಿಯಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ. ಅಸ್ಟ್ರಾಜೆನಿಕಾದ ಲಸಿಕೆ ಆ ದೇಶಗಳ ಜನರಿಗೆ ಸಿಗುತ್ತಿಲ್ಲ. ಭಾರತದ ಸೆರಂ ಕಂಪನಿ ತಯಾರಿಸುತ್ತಿರುವ ಆಕ್ಸ್ರ್ಡ್&ಅಸ್ಟ್ರಾಜೆನಿಕಾದ ಲಸಿಕೆಯನ್ನು ಡಬ್ಲ್ಯುಎಚ್ಒದ ಕೊವ್ಯಾಕ್ಸ್ ಕಾರ್ಯಕ್ರಮದಡಿ ಈ ದೇಶಗಳಿಗೆ ವಿತರಿಸಬೇಕಿತ್ತು. ಆದರೆ ಭಾರತದಲ್ಲೇ ಲಸಿಕೆ ಕೊರತೆ ಆಗಿರುವ ಕಾರಣ ರಫ್ತಿನ ಮೇಲೆ ರ್ನಿಬಂಧ ಹೇರಲಾಗಿದೆ. ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯ ಪ್ರಾಚ್ಯದ ದೇಶಗಳು ಮಾತ್ರವಲ್ಲದೆ ಭಾರತದ ನೆರೆಯ ದೇಶಗಳಾದ ನೇಪಾಳ ಮತ್ತು ಶ್ರೀಲಂಕಾ ಕೂಡ ಲಸಿಕೆಯಿಲ್ಲದೆ ಪರದಾಡುತ್ತಿವೆ. ಲಸಿಕೆ ಪಡೆಯಲು ಭಾರತ ಸರ್ಕಾರದೊಂದಿಗೆ "ತುರ್ತು' ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ?
ಸಮಗ್ರ ಪರಿಶೀಲನೆ ಬಳಿಕ ಶಾಲೆ ಆರಂಭ
ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದೆ. ಆದರೆ ಸಂಭಾವ್ಯ ಮೂರನೇ ಅಲೆ ವೇಳೆ ಮಕ್ಕಳು ರೋಗಕ್ಕೆ ತುತ್ತಾಗಬಹುದು ಎಂಬ ಭೀತಿಯಿರುವುದರಿಂದ ಶಾಲೆಗಳ ಪುನರಾರಂಭದ ಕುರಿತು ಇನ್ನೂ ಯೋಚನೆ ಮಾಡಬೇಕಾಗಿದೆ. "ಶಾಲೆಗಳನ್ನು ಪುನರಾರಂಭಿಸುವ ಮುನ್ನ ಅನೇಕ ವಿಷಯಗಳನ್ನು ಪರಿಶೀಲಿಸಬೇಕಾಗುತ್ತದೆ' ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಹೇಳಿದ್ದಾರೆ. ಲಸಿಕೆ ಅಭಿಯಾನ ವಿಸ್ತರಣೆಯಾಗುತ್ತಿರುವಂತೆ ಶಿಕ್ಷಕರಿಗೆ ಲಸಿಕೆ ಸಿಗುತ್ತದೆ. ದೈನಂದಿನ ಜೀವನದಲ್ಲಿ ಸಾಮಾಜಿಕ ಅಂತರ ನಿಯಮವನ್ನು ಅನುಷ್ಠಾನ ಮಾಡಬೇಕು. ಹಲವು ದೇಶಗಳಲ್ಲಿ ಶಾಲೆಗಳ ಪುನರಾರಂಭವಾದ ಮೇಲೆ ಕೋವಿಡ್ ಸೋಂಕು ಸ್ಫೋಟಗೊಂಡಿವೆ. ಹಾಗಾಗಿ ಶಾಲೆಗಳನ್ನು ಪುನ@ ಮುಚ್ಚಬೇಕಾಯಿತು. ನಮ್ಮ ಮಕ್ಕಳು ಮತ್ತು ಶಿಕ್ಷಕರನ್ನು ಅಂಥ ಸ್ಥಿತಿಗೆ ತಳ್ಳುವುದು ಸರ್ಕಾರಕ್ಕೆ ಇಷ್ಟವಿಲ್ಲ. ಸಾಂಕ್ರಾಮಿಕತೆ ನಮಗೆ ಹಾನಿ ಮಾಡುವುದಿಲ್ಲ ಎಂಬ ಹೆಚ್ಚಿನ ವಿಶ್ವಾಸ ಮೂಡುವವರೆಗೂ ಶಾಲೆಗಳ ಪುನರಾರಂಭ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.