ನ್ಯೂಸ್

ಅಯೋಧ್ಯೆ ರಾಮ ಮಂದಿರಕ್ಕೆ ಶಿಲಾನ್ಯಾಸ; ಅಮೆರಿಕದ ದೇಗುಲಗಳಲ್ಲೂ ವಿಶೇಷ ಪೂಜೆ

vinaymk1969

ವಾಷಿಂಗ್ಟನ್​: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾ ನಿ ನರೇಂದ್ರ ಮೋದಿ ಬುಧವಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸಂಭ್ರಮಕ್ಕಾಗಿ ಅಮೆರಿಕದ ಉದ್ದಗಲಕ್ಕೂ ಇರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗುತ್ತಿದೆ. ರಾಮ ದೇವಾಲಯದ ಡಿಜಿಟಲ್​ ಚಿತ್ರಗಳನ್ನು ಇರಿಸಿದ ಶ್ರೀರಾಮ ಟ್ಯಾಬ್ಲೋ ಜತೆ ಯುಸ್​ ಕ್ಯಾಪಿಟಲ್​ ಹಿಲ್​ನಲ್ಲಿ ಮಂಗಳವಾರ ರಾತ್ರಿ ಭವ್ಯ ಮೆರವಣಿಗೆ ನಡೆಸಲಿದ್ದಾರೆ.

ಬುಧವಾರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸಲಿರುವ ಕಾರಣ, ಅಮೆರಿಕದ ಉದ್ದಗಲಕ್ಕೂ ಇರುವ ದೇಗುಲಗಳಲ್ಲಿ ವಿಶೇಷ ಪೂಜೆ ಆಯೋಜಿಸುವ ಮೂಲಕ ಭಾರತೀಯ-ಅಮೆರಿಕನ್ನರು ರಾಮ ದೇಗುಲ ನಿರ್ಮಾಣದ ಸಂಭ್ರಮ ಆಚರಿಸಲಿದ್ದಾರೆ. ಅಲ್ಲದೆ, ಪ್ರತಿಯೊಂದು ಮನೆಯಲ್ಲೂ ದೀಪ ಬೆಳಗಿಸಲು ನಿರ್ಧರಿಸಿದ್ದಾರೆ.

ದ ಹಿಂದು ಮಂದಿರ್​ ಎಕ್ಸಿಕ್ಯೂಟೀವ್ಸ್​ ಕಾನ್ಫರೆನ್ಸ್​ ಮತ್ತು ಹಿಂದು ಮಂದಿರ್​ ಪ್ರೀಸ್ಟ್​ಸ್​ ಕಾನ್ಫರೆನ್ಸ್​ ವರ್ಚುಯಲ್​ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಕರೆ ನೀಡಿದ್ದಾರೆ. ನ್ಯೂಯಾರ್ಕ್​ನಲ್ಲಿರುವ ಭಾರತೀಯ ಅಮೆರಿಕನ್ನರು ಕೂಡ ರಾಮ ದೇಗುಲದ ಸಂಭ್ರಮ ಆಚರಿಸಲು ನಿರ್ಧರಿಸಿದ್ದು, ಪ್ರತಿಷ್ಠಿತ ಟೈಮ್ಸ್​ ಸ್ಕ್ವೇರ್​ನಲ್ಲಿ ಶ್ರೀ ರಾಮ ಮಂದಿರದ 3ಡಿ ಪ್ರತಿಕೃತಿಗಳನ್ನು ಬೃಹತ್​ ಪರದೆಗಳ ಮೇಲೆ ಪ್ರದರ್ಶಿಸಲಾಗುತ್ತದೆ.