ನ್ಯೂಸ್

ಮಣ್ಣಿನ ದೀಪ, ಗಿಡ ವಿತರಿಸಿ ಹಸಿರು ದೀಪಾವಳಿ ಆಚರಿಸುವಂತೆ:ಆರ್ಯವೈಶ್ಯ ಮಂಡಳಿ, ವ್ಯಾಸ ಯುವ ಜನ ಸಂಘ.

ಬೆಂಗಳೂರು: ಆರ್ಯವೈಶ್ಯ ಮಂಡಳಿ ಮತ್ತು ವಾಸವಿ ಯುವ ಜನ ಸಂಘ ಸಹಯೋಗದಲ್ಲಿ ನಗರದ ಲಾಲ್ ಬಾಗ್ ಬಳಿ ಪರಿಸರ ಮಾಲಿನ್ಯ ತಡೆಗಟ್ಟಲು ದೀಪಾವಳಿಯಂದು ಪಟಾಕಿ ಬದಲು ಹಸಿರು ದೀಪಾವಳಿ ಆಚರಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಸತತ 9 ವರ್ಷದಿಂದ ನಿರಂತರವಾಗಿ ಜಾಗೃತಿ ಮೂಡಿಸುತ್ತ ಬಂದಿದ್ದು,ಪ್ರಕೃತಿ ಉಳಿಸಿ ಸಂರಕ್ಷಿಸಲು ದೀಪಾವಳಿಯಂದು ಮಣ್ಣಿನ ದೀಪಗಳು ಹಾಗೂ ಗಿಡಗಳನ್ನು ವಿತರಿಸುವ ಮೂಲಕ ಜನ ಜಾಗೃತಿ ಮೂಡಿಸುತ್ತ ಬಂದಿದೆ. ಈ ಬಾರಿ 1 ಸಾವಿರಕ್ಕೂ ಅಧಿಕ ಗಿಡಗಳನ್ನು ವಿತರಣೆ ಮಾಡಿದ್ದು ವಿಶೇಷವಾಗಿತ್ತು.

ಇದೇ ವೇಳೆ ಎಪಿಎನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ.ಎ ಡಾ ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳ ಯುವ ಸಮೂಹದ ಜತೆಗೂಡಿ ಜನ ಜಾಗೃತಿ ಮೂಡಿಸಲಾಗುತ್ತಿದೆ. ವರ್ಷಕ್ಕೊಂದು ದೀಪಾವಳಿ, ವರ್ಷಕ್ಕೊಂದು ಗಿಡ ನೆಡಿ ಎಂಬ ಘೋಷವಾಕ್ಯದಡಿ ಜಾಗೃತಿ ಮೂಡಿಸುತ್ತಿದ್ದೇವೆ ದೀಪದಿಂದಲೇ ಬೆಳಕು, ಮರಗಳಿಂದಲೇ ಬದುಕು ಎಂಬ ಸಂದೇಶವನ್ನು ಪ್ರತಿಯೊಬ್ಬರು ಅರಿಯಬೇಕು. ಹಣತೆ ಬೆಳಗುವುದು ನಮ್ಮ ಸಂಪ್ರದಾಯ, ಪಟಾಕಿ ಸುಡುವುದಲ್ಲ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಅಂಜನ್ , ಮಾಜಿ ಅಧ್ಯಕ್ಷ ಮುರಳಿಕೃಷ್ಣ, ಕಾರ್ಯದರ್ಶಿ ಸತೀಶ್, ಮಾಜಿ ಪಾಲಿಕೆ ಸದಸ್ಯೆ ದೀಪಾ ನಾಗೇಶ್, ದ್ವಾರಕಾನಾಥ್ ಶಂಕರ್ ಮತ್ತಿತರರಿದ್ದರು.