ನ್ಯೂಸ್

ಕುತಂತ್ರಿ ಪಾಕ್​​ನ ಕದನ ವಿರಾಮ ಉಲ್ಲಂಘನೆಯಿಂದ ಮಹಿಳೆಗೆ ಗಾಯ

ಶ್ರೀನಗರ: ಕುತಂತ್ರಿ ಪಾಕ್​​ನ ಕದನ ವಿರಾಮ ಉಲ್ಲಂಘನೆ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆ ಗುರುವಾರ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್‌ಧಾರ್ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಈ ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಪಾಕಿಸ್ತಾನ ಸೇನೆಯು ಕಳೆದ ರಾತ್ರಿ ನಿಯಂತ್ರಣ ರೇಖೆಯ ಬಳಿ ಮುಂದಿನ ಪ್ರದೇಶಗಳಲ್ಲಿನ ಜನಸಾಮಾನ್ಯರು ವಾಸಿಸುವ ಗ್ರಾಮಗಳನ್ನು ಗುರಿಯಾಗಿಸಿತ್ತು. ಇದರಿಂದಾಗಿ ಕುಪ್ವಾರಾ ಜಿಲ್ಲೆಯ ತಂಗ್ಧರ್ ಸೆಕ್ಟರ್‌ನ ಹಾಜಿತ್ರಾ ಗ್ರಾಮದ ಮಹಿಳೆಗೆ ಗುಂಡು ತಗುಲಿತು ಎಂದು ಅವರು ಹೇಳಿದರು. ಪಾಕಿಸ್ತಾನದ ಆಕ್ರಮಣಕ್ಕೆ ಸೇನೆಯು ಸೂಕ್ತ ಪ್ರತಿಕ್ರಿಯೆ ನೀಡಿದೆ ಎಂದು ಅಧಿಕಾರಿ ಹೇಳಿದರು.