ನ್ಯೂಸ್

ಕೊನೆಗೂ ಪತ್ತೆಯಾಯ್ತು ಕರೊನಾ ಮೂಲ! ಮುಂಗುಸಿಗೆ ಹೋಲುವ ಪ್ರಾಣಿಯಲ್ಲಿತ್ತಂತೆ ವೈರಸ್​

ನ್ಯೂಯಾರ್ಕ್: ಸತತ ಎರಡು ವರ್ಷಗಳ ಬಳಿಕ ಕರೊನಾ ಸೋಂಕು ಎಲ್ಲಿಂದ ಸೃಷ್ಟಿಯಾಯಿತು ಎಂಬುದು ಕೊನೆಗೂ ಪತ್ತೆಯಾಗಿದೆ.

ನಾಲ್ವರು ಅಮೆರಿಕನ್ನರಿಗೆ ಮೊದಲ ಬಾರಿಗೆ ಪ್ರಾಣಿಯಿಂದ ಕರೋನಾ ಸೋಂಕು ತಗುಲಿತ್ತು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ದೃಢಪಡಿಸಿದೆ.

2020ರಲ್ಲಿ ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿತ್ತು. ಈ ವೇಳೆ ಮುಂಗುಸಿಯಂತಹ ಪ್ರಾಣಿಯಲ್ಲಿ ಕರೊನಾ ಪತ್ತೆಯಾಗಿತ್ತು. ಈ ವೇಳೆ ಇದರಿಂದಲೇ ಹರಡಿದೆಯೇ ಎಂಬುದು ಮಾತ್ರ ಗೊಂದಲವಾಗಿತ್ತು. ಆದರೀಗ ಇದು ದೃಢವಾಗಿದೆ.

ಮೊಟ್ಟ ಮೊದಲ ಬಾರಿಗೆ ಈ ಪ್ರಾಣಿಗಳಲ್ಲೇ ಕೋವಿಡ್​ ಸೋಂಕು ಕಾಣಿಸಿಕೊಂಡಿತ್ತು. ಈ ಪ್ರಾಣಿಗಳನ್ನು ಸಾಕುವ ಸಂಗ್ರಹಾಲಯದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಿಬ್ಬಂದಿಗೆ ಪರೀಕ್ಷೆಗೊಳಪಡಿಸಲಾಗಿತ್ತು. ಆಗಲೇ ಸೋಂಕಿನ ಸತ್ಯ ಬಯಲಾಗಿದೆ.

ಈ ಪ್ರಾಣಿಗಳನ್ನು ಸಾಕುತ್ತಿದ್ದ ಸ್ಥಳದಿಂದ ಇತರೆ ಪ್ರಾಣಿಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆದರೆ ಮುಂಗುಸಿಯಂತಹ ಪ್ರಾಣಿಯಲ್ಲೇ ಕರೊನಾ ಸೋಂಕಿರುವುದು ಪತ್ತೆಯಾಗಿದೆ.

ಈಗಾಗಲೇ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಿರುವ ವೈರಸ್​ಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಇದು ಸ್ಪಷ್ಟವಾಗಿದ್ದು, ನೆದರ್​ಲ್ಯಾಂಡ್​ನಲ್ಲೂ ಕೂಡ ಇದೇ ಪ್ರಾಣಿಯಲ್ಲಿ ವೈರಸ್​ ಪತ್ತೆಯಾಗಿದೆ ಎಂದು ಸಿಡಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.