ನ್ಯೂಸ್

ಅವಧಿ ಮೀರಿ ನಡೆಸುತ್ತಿದ್ದ ಬಾರ್​ ಮೇಲೆ ಸಿಸಿಬಿ ದಾಳಿ

ದೊಮ್ಮಲೂರು: ದೊಮ್ಮಲೂರು ಬಳಿ ಇರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ ಮಾಡಿದ್ದು ಅವಧಿ ಮೀರಿ ಬಾರ್​ ನಡೆಸುತ್ತಿರುವವರಿಗೆ ಇದು ಎಚ್ಚರಿಕೆಯ ಸಂದೇಶವಾಗಿದೆ.

ಅವಧಿ ಮೀರಿ ಬಾರ್ ನಡೆಸುತ್ತಿದ್ದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ತಡರಾತ್ರಿ ದಾಳಿ ನಡೆಸಿದ್ದಾರೆ, ದೊಮ್ಮಲೂರು ಬಳಿ ಇರುವ ಕ್ರೇಜಿ ಬಾಯ್ಸ್ ಬಾರ್​ ಆ್ಯಂಡ್ ರೆಸ್ಟೋರೆಂಟ್ ಮೇಲೆ ತಡರಾತ್ರಿ ಒಟ್ಟು ಹತ್ತು ಜನ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅವಧಿ ಮೀರಿ ರೆಸ್ಟೋರೆಂಟ್ ನಡೆಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಪಕ್ಕಾ ಮಾಹಿತಿ ಲಭಿಸಿದ್ದ ಹಿನ್ನಲೆಯಲ್ಲಿ ರೈಡ್ ಮಾಡಿದ್ದಾರೆ.