ಬೆಂಗಳೂರು: ಬಾಷ್, ಮೈಕ್ರೋಸ್‌ಟಾ ಕಂಪನಿಯಲ್ಲಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಸ್‌ಟಾವೇರ್ ಇಂಜಿನಿಯರ್‌ನನ್ನು ಸಿಸಿಬಿ ವಿಶೇಷ ವಿಚಾರಣಾ ದಳ ಬಂಧಿಸಿದೆ.
ಜೆ.ಪಿ. ನಗರದ ಸಾರಕ್ಕಿ ಕರೆ ಬಳಿಯ ನಿವಾಸಿ ಪತ್ನೂರ್ ಕಲಂದರ್ ಖಾನ್ (43) ಬಂಧಿತ. ಕೇರಳದಿಂದ 2024ರಲ್ಲಿ ನೌಕರಿ ಅರಸಿ ಬೆಂಗಳೂರಿಗೆ ಬಂದಿದ್ದ ಪತ್ನೂರ್, ತನಗೆ ಸರಿಯಾದ ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಟಿಎಂ ಲೇಔಟ್ ಡಾಲರ್ಸ್ ಕಾಲನಿಯಲ್ಲಿ ಇರುವ ಮ್ಯಾಗ್ನಾಮಿಕ್ಸ್ ಸರ್ವೀಸ್ ಪ್ರೈ.ಲಿ.ನಲ್ಲಿ ಎಚ್.ಆರ್. ಮತ್ತು ಟ್ರೇನರ್ ಕೆಲಸಕ್ಕೆ ಸೇರಿದ್ದ. ನಂತರ ಸಿಂಥೆಟಿಕ್ ಸ್‌ಟಾವೇರ್ ಪ್ರೈ.ಲಿ. ಮತ್ತು ಮ್ಯಾಗ್ನಾಮಿಕ್ಸ್ ಸರ್ವೀಸ್ ಪ್ರೈ.ಲಿ. ಕಂಪನಿಗಳಲ್ಲಿ ಕೆಲಸಕ್ಕೆ ಬರುವ ಅಭ್ಯರ್ಥಿಗಳ ಜತೆ ಸ್ನೇಹ ಬೆಳೆಸಿದ್ದ.
ನಿಮಗೆ ಪ್ರತಿಷ್ಠಿತ ಎಂಎನ್‌ಸಿ ಕಂಪನಿಗಳಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ 8 ಅಭ್ಯರ್ಥಿಗಳಿಂದ 14.23 ಲಕ್ಷ ರೂ. ಪಡೆದು ಕೆಲಸ ಕೊಡಿಸದೆ, ಹಣವನ್ನೂ ಮರಳಿದೆ ವಂಚಿಸಿದ್ದ. ಈ ಕೃತ್ಯಕ್ಕೆ ವೀರೇಶ್ ಮತ್ತು ಇನಾಯತ್ ಎಂಬುವರು ಸಹಕರಿಸುತ್ತಿದ್ದರು. ಇದೇ ರೀತಿಯಾಗಿ ಗೀತಾ ಎಂಬಾಕೆಗೆ ಪ್ರತಿಷ್ಠಿತ ಕಂಪನಿಯಲ್ಲಿ ನೌಕರಿ ಕೊಡಿಸುವುದಾಗಿ 2.70 ಲಕ್ಷ ರೂ. ಪಡೆದುಕೊಂಡಿದ್ದ. ಸುಳ್ಳು ಆಶ್ವಾಸನೆ ಕೊಟ್ಟು ಮೋಸ ಮಾಡಿದ್ದ.
ನೊಂದ ಗೀತಾ ಮತ್ತು ಇತರರು ಸಿಸಿಬಿಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಆರೋಪಿ ಪತ್ನೂರ್ ಖಾನ್‌ನ್ನು ಬಂಧಿಸಿ 1.50 ಲಕ್ಷ ರೂ. ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.