ನ್ಯೂಸ್

ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ರದ್ದು

Mandara

ನವದೆಹಲಿ: ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪರೀಕ್ಷೆ ನಡೆಯುತ್ತದೆಯೇ ಇಲ್ಲವೇ ಎನ್ನುವ ಗೊಂದಲಕ್ಕೆ ಈ ಮೂಲಕ ತೆರೆ ಎಳೆಯಲಾಗಿದೆ.

ಪರೀಕ್ಷೆ ನಡೆಸುವ ಸಾಧ್ಯಾಸಾಧ್ಯತೆಗಳ ಕುರಿತಾಗಿ ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಪರೀಕ್ಷೆ ನಡೆಸದೆಯೇ ಇರಲು ಬೇರಾವುದಾದರೂ ಪರ್ಯಾಯ ಮಾರ್ಗಗಳು ಇವೆಯೇ ಎನ್ನುವುದರ ಬಗ್ಗೆ ಪ್ರಧಾನಿ ಚರ್ಚೆ ಮಾಡಿದ್ದಾರೆ. ದೇಶದಲ್ಲಿ ಕರೊನಾ ಮಿತಿ ಮೀರಿರುವ ಈ ಸಮಯದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಗಿತ್ತು.

ಸಿಬಿಎಸ್​ಇ ಪರೀಕ್ಷೆಯ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಕೇಂದ್ರಕ್ಕೆ ಪ್ರಶ್ನೆ ಕೇಳಿತ್ತು. ಜೂನ್​ 3ರ ಒಳಗೆ ಕೇಂದ್ರ ಸುಪ್ರೀಂ ಕೋರ್ಟ್​ಗೆ ಪ್ರತಿಕ್ರಿಯೆ ನೀಡಬೇಕಿದೆ. (ಏಜೆನ್ಸೀಸ್​)