ನವದೆಹಲಿ: ವಿವಾದಾತ್ಮಕ ಅಬಕಾರಿ ನೀತಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಗಾಜಿಯಾಬಾದ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಶಾಖೆಗೆ ಮಂಗಳವಾರ ತೆರಳಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಲಾಕರ್ ಪರಿಶೀಲಿಸಿದರು.
ಆದರೆ ಅದರಲ್ಲಿ ಏನೂ ಸಿಗದೆ ವಾಪಸದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಸೋಡಿಯಾ, ಇದು ತಮಗೆ ಸಿಕ್ಕ "ಕ್ಲೀನ್ ಚಿಟ್' ಎಂದು ಸಂತೋಷ ವ್ಯಕ್ತಪಡಿಸಿದರು. ತಮ್ಮ ಮನೆ ಮೇಲೆ ದಾಳಿ ಮಾಡಿದಾಗಲೂ ಏನೂ ದೊರೆತಿರಲಿಲ್ಲ. ಇದು ನಿದೋರ್ಷಿ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು. 2021&22ರ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಕುರಿತು ಸಿಬಿಐ ಪ್ರಕರಣ ದಾಖಲಿಸಿದ್ದು ಸಿಸೋಡಿಯಾ ಹಗರಣದ ಕೇಂದ್ರ ಬಿಂದು.