ಬಳ್ಳಾರಿಯ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಕುಮಾರಸ್ವಾಮಿ ಮತ್ತು ಅವರ ಮಗ ಹಾಲಿ ಸದಸ್ಯ ಗೋವಿಂದರಾಜು ಅವರ ಗಾಂಧಿನಗರದಲ್ಲಿರುವ ಮನೆ ಮೇಲೆ ಸೋಮವಾರ CBI ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನಿಂದ ಇನ್ನೋವ ಕಾರಿನಲ್ಲಿ ಬಂದಿರೋ ಸಿಬಿಐ ಅಧಿಕಾರಿಗಳ ತಂಡ ಇದೀಗ ಕಾರ್ಪೊರೇಟರ್ ಮನೆ ಮೇಲೆ ದಾಳಿ ಮಾಡಿದ್ದಾರೆ. ವಾಲ್ಮೀಕಿ ಹಗಣದ ಹಿನ್ನೆಲೆ ನಡೆದಿರೋ ದಾಳಿ ಎನ್ನಲಾಗುತ್ತಿದೆ. ನೆಕ್ಕಂಟಿ ನಾಗರಾಜ್ ಅಕೌಂಟ್ ನಿಂದ ಕಾರ್ಪೋರೆಟರ್ ಗೋವಿಂದರಾಜು ಅಕೌಂಟ್ಗೆ ಹಣ ವರ್ಗಾವಣೆಯಾಗಿತ್ತು ಎಂಬ ಮಾಹಿತಿ ಇದೆ.
ವಾಲ್ಮೀಕಿ ಹಗರಣಕ್ಕೂ ಮುನ್ನ ಕಾರ್ಪೋರೆಟರ್ ಗೋವಿಂದರಾಜು ಮನೆಯನ್ನು ನಾಗೇಂದ್ರ ಅವರಿಗೆ ಮಾರಾಟ ಮಾಡಲಾಗಿತ್ತು. ಆದರೆ, ಖರೀದಿಯಾಗಿರಲಿಲ್ಲ ಹಣದ ವಹಿವಾಟು ಮಾತ್ರ ಆಗಿತ್ತು. ಈ ಹಿನ್ನೆಲೆ ದಾಳಿಯಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಮತ್ತೊಂದೆಡೆ ಮೊಟ್ಟೆ ವ್ಯಾಪಾರ ಸೇರಿದಂತೆ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿರೋ ಕುಮಾರಸ್ವಾಮಿ ಹೂಡಿಕೆ ಮಾಡಿದ್ದಾರೆ. ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಮೊಟ್ಟೆ ವ್ಯಾಪಾರ ಸೇರಿ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು, ಈ ಹಿನ್ನೆಲೆ ಗೋವಿಂದರಾಜು ಅಕೌಂಟ್ ನಲ್ಲಿ ಕೋಟ್ಯಾಂತರ ವಹಿವಾಟು ನಡೆದಿದೆ. ಹೀಗಾಗಿ ಸಿಬಿಐ ದಾಳಿ ನಡೆದಿದೆ ಎನ್ನಲಾಗುತ್ತಿದೆ.