ನ್ಯೂಸ್

ಲಂಚ ಪ್ರಕರಣ: ಟಾಟಾದ ಐವರು ಅಧಿಕಾರಿಗಳು ಸೇರಿ 6 ಮಂದಿ ಬಂಧನ

ನವದೆಹಲಿ: ಟಾಟಾ ಪವರ್​ ಗ್ರಿಡ್​ ಕಾರ್ಪೋರೇಷನ್​​ ಆಫ್​ ಇಂಡಿಯಾ ಲಿಮಿಟೆಡ್​​ನ ಕಾರ್ಯ ನಿರ್ವಾಹಕ ನಿರ್ದೇಶಕ ಬಿಎಸ್​​ ಝಾ ಸೇರಿದಂತೆ ಆರು ಮಂದಿಯನ್ನು ಸಿಬಿಐ ಬಂಧಿಸಿದೆ.

ಲಂಚ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿಸಲಾಗಿದ್ದು, ಬಂಧಿತ ಐವರು ಕಾರ್ಯನಿರ್ವಾಹಕರಲ್ಲಿ ಟಾಟಾ ಪ್ರಾಜೆಕ್ಟ್ಸ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷ ದೇಶರಾಜ್ ಪಾಠಕ್ ಮತ್ತು ಸಹಾಯಕ ಉಪಾಧ್ಯಕ್ಷ ಆರ್‌.ಎನ್‌. ಸಿಂಗ್ ಅವರಂತಹ ಉನ್ನತ ಶ್ರೇಣಿಯ ಅಧಿಕಾರಿಗಳೂ ಸೇರಿದ್ದಾರೆ.

ದಾಳಿ ವೇಳೆ ಬಿಎಸ್​​ ಝಾ ಅವರ ನಿವಾಸದಿಂದ 93 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ದೇಶದಾದ್ಯಂತ 11 ಸ್ಥಳಗಳಲ್ಲಿ ದಾಳಿ ನಡೆಸಿದ್ದ ಕೇಂದ್ರೀಯ ತನಿಖಾ ದಳ ಜುಲೈ 7 ರಂದು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಲಂಚ ಪಡೆದಿರುವ ಆರೋಪ ಇವರ ಮೇಲಿದೆ. ಸದ್ಯ ಸಿಬಿಐ ತನಿಖೆ ನಡೆಸುತ್ತಿದೆ. (ಏಜೆನ್ಸೀಸ್​)