ರಾಮನಗರ: ತಮಿಳುನಾಡಿನ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ನೀರು ಬಿಡುತ್ತಿದ್ದಾರೆ, ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿದವರು ರಾಜ್ಯಸಭೆಯಲ್ಲಿ ಇದ್ದರಲ್ಲಾ ಈಗ ಎಲ್ಲಿ ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಸಿದರು.
ಬಿಡದಿಯ ತಮ್ಮ ತೋಟದ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾವೇರಿ ನಿರ್ವಹಣಾ ಪ್ರಾಧಿಕಾರ ತಮಿಳುನಾಡಿನ ಒತ್ತಡಕ್ಕೆ ಮಣಿದು ಮುಂದಿನ 18 ದಿನಗಳ ಕಾಲ 5000 ಕ್ಯೂಸೇಕ್ ನೀರು ಬಿಡುಗಡೆಗೆ ಆದೇಶ ಮಾಡಿದೆ.
ಈ ಸಂಬಂಧ ಮುಂದೆ ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆ ಇದೆ. ವಿಚಾರಣೆ ಬರುವ ಮೊದಲೆ ರಾಜ್ಯದ ನೀರಾವರಿ ಮಂತ್ರಿಗಳು ಮಧ್ಯರಾತ್ರಿ ನೀರು ಬಿಟ್ಟಿದ್ದಾರೆ. ನೀರಾವರಿ ಸಚಿವರು ತರತುರಿಯಲ್ಲಿ ನೀರು ಬಿಡುವ ಅವಶ್ಯಕತೆ ಏನಿತ್ತು ಎಂದು ಎಚ್ ಡಿಕೆ ಪ್ರಶ್ನಿಸಿದರು.
ಐ ಎನ್ ಡಿ ಐ ಎ ಮಾಡಿಕೊಂಡಿದ್ದರಲ್ಲ ಅದರ ಮುಖ್ಯಸ್ಥರಾಗಿ ಖರ್ಗೆ ಇದ್ದಾರಲ್ಲ ಅವರು ಏಕೆ ಕಾವೇರಿ ಬಗ್ಗೆ ತಮಿಳುನಾಡಿನ ಸಿಎಂ ಜೊತೆಗೆ ಚರ್ಚೆ ಮಾಡಲಿಲ್ಲ ಎಂದು ಕುಟಿಕಿದ ಕುಮಾರಸ್ವಾಮಿ, ಈಗಿನ ಸರ್ಕಾರ ರೈತರ ಜೊತೆಗೆ ಚೆಲ್ಲಾಟ ಆಡುತ್ತಿದ್ದು, ಕಾನೂನಿನ ಹೋರಾಟದವರೆಗೂ ಕಾದು ನೀರು ಬಿಡಬಹುದಿತ್ತು ಎಂದರು.
ನಮ್ಮ ರೈತರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ.ಕಬ್ಬು ಭತ್ತಕ್ಕೆ ನೀರಿಲ್ಲ. ಬೆಳೆದ ಬೆಳೆಗಳನ್ನ ರೈತರು ಸುಟ್ಟುಹಾಕುತ್ತಿದ್ದಾರೆ. ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆಗೆ ನಮ್ಮ ರಾಜ್ಯದ ಅಧಿಕಾರಿಗಳು ಭಾಗವಹಿಸುತ್ತಿಲ್ಲ.
ಕೇವಲ 2-3 ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಾರೆ. ಆದರೆ ತಮಿಳುನಾಡಿನ ಅಧಿಕಾರಿಗಳು ತಂಡ ತಂಡವಾಗಿ ಸಭೆಯಲ್ಲಿ ಭಾಗವಹಿಸುತ್ತಾರೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಕಾವೇರಿ ನೀರಾವರಿಗಿಂತ ದೊಡ್ಡ ಕೆಲಸಗಳು ಇರುತ್ತವೆ ಎಂದು ಟೀಕಿಸಿದರು.
ಸುಪ್ರೀಂ ಕೋರ್ಟ್ ಗೆ ರಾಜ್ಯ ಸರ್ಕಾರದಿಂದ ಅರ್ಜಿ ಹಾಕಿ ಅಂತ ಒಂದು ತಿಂಗಳ ಹಿಂದೆ ಹೇಳಿದ್ದೆ. ಸರ್ವ ಪಕ್ಷದ ಸಭೆ ಕರೆಯಿರಿ ಅಂತ ಕೂಡ ಹೇಳಿದ್ದೆ. ಕೋರ್ಟ್ ಆದೇಶ ಬಂದ ಮೇಲೆ ನೀರು ಬಿಡೋಣೊ ಎಂದು ಸಲಹೆ ನೀಡಿದ್ದೆ.
ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ವಿರುದ್ಧ ಕೋರ್ಟ್ ನಲ್ಲಿ ಅರ್ಜಿ ಹಾಕಿಸಿ, ಹೋರಾಟ ಮಾಡಿ ಜಯವೂ ದೊರೆಯಿತು ಎಂದರು.
ಲೋಕ ಸಭೆ ಯಲ್ಲಿ ದೇವೇಗೌಡರು ಕಾವೇರಿ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಖರ್ಗೆ ಅವರು ಎಲ್ಲಿ ಹೋಗಿದ್ದಾರೆ. ಲೋಕಸಭೆಯಲ್ಲಿ ದೇವೇಗೌಡರು ಮಾತನಾಡುವ ವೇಳೆ ತಮಿಳುನಾಡಿನ ರಾಜ್ಯ ಸಭಾ ಸದಸ್ಯರು ಗಲಾಟೆ ಮಾಡಿದ್ದಾರೆ.
ಈ ವಿಚಾರದಲ್ಲಿ ರಾಜ್ಯದ ಸದಸ್ಯರು ಗೌಡರಿಗೆ ಸಾಥ್ ನೀಡಲಿಲ್ಲ. ಆರೋಗ್ಯದ ಸಮಸ್ಯೆ ಇದ್ದರು ಹೋರಾಟ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂಡ್ಯದ ಮಾಹನ್ ವ್ಯಕ್ತಿ ( ಚಲುವರಾಯಸ್ವಾಮಿ) ಅವರು ದೆಹಲಿಗೆ ಹೊಂದಾಣಿಕೆ ಬಗ್ಗೆ ಮಾತನಾಡಲು ಗೌಡರು ಹೋಗಿದ್ದಾರೆ. ಕಾವೇರಿ ವಿಚಾರವಾಗಿ ಮಾತನಾಡಲು ಹೋಗಿಲ್ಲ ಎಂದು ಹೇಳಿದ್ದಾರೆ. ಮೊದಲು ಈ ವಿಚಾರವಾಗಿ ನಿಮ್ಮ ಪಕ್ಷದ ನಾಯಕರಿಗೆ ಮಾತನಾಡಲು ಹೇಳಿ. ನೀರಾವರಿ ಸಚಿವರು ಇದೀಗ ಕೋರ್ಟ್ ಗೆ ಅರ್ಜಿ ಹಾಕುವುದಾಗಿ ಹೇಳಿದ್ದಾರೆ.
ಈ ವಿಚಾರವಾಗಿ ನಾನು ಈ ಹಿಂದೆಯೆ ತಿಳಿಸಿದ್ದೆ. ಕಾಫಿ, ಚಿಪ್ಸ್, ಬಾದಮಿ ಹಾಲಿಗೆ ಗೋಸ್ಕರ ಸರ್ವಪಕ್ಷದ ಸಭೆ ನಡಸುತ್ತೀರಾ ಸ್ವಾತಂತ್ರ್ಯ ಬಂದ ನಂತರವು ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗುತ್ತಲೆ ಇದೆ. ಎಚ್.ಡಿ.ಡಿ ಪ್ರಧಾನಿ ಆಗಿದ್ದಾಗ ರಾಜ್ಯದ ಹಲವು ನೀರಾವರಿ ಯೋಜನೆಗೆ ಹಣ ನೀಡಿದ್ದಾರ ಎಂದರು.