ನ್ಯೂಸ್

ಕಾವೇರಿ ನೀರು ಹಂಚಿಕೆ; ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್​​ನಂತೆ 15 ದಿನ ನೀರು ಹರಿಸಲು ಸೂಚನೆ

ಬೆಂಗಳೂರು: ಮಳೆ ಇಲ್ಲದೆ ಬರಗಾಲ ಎದುರಾಗುವ ಭೀತಿಯ ನಡುವೆಯೂ ಕರ್ನಾಟಕಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. 15 ದಿನ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿದೆ.

ಈಗಾಗಲೇ ರಾಜ್ಯದಿಂದ ತಮಿಳುನಾಡಿಗೆ 1900 ಕ್ಯೂಸೆಕ್ ನೀರು ಬಿಡುತ್ತಿದೆ. ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಸೂಚನೆ ಮೇರೆಗೆ ಇನ್ನೂ 3,100 ಕ್ಯೂಸೆಕ್ ನೀರು ಹರಿಸಬೇಕಾಗಿದೆ. ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 5000 ಕ್ಯೂಸೆಕ್ ದಾಖಲಾಗಬೇಕಾದ ಕಾರಣ, 3100 ಕ್ಯೂಸೆಕ್ ನೀರು ಬಿಡಗಡೆ ಮಾಡಲೇಬೇಕಾಗಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಅಂತ್ಯವಾಗಿದ್ದು, ಸಭೆಯಲ್ಲಿ ನೀರು ಹಂಚಿಕೆ ಕುರಿತು ತಿರ್ಮಾನ ಮಾಡಲಾಗಿದೆ. 15 ದಿನ‌ಗಳಕಾಲ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ, ಬಿಳಿಗುಂಡ್ಳು ಮಾಪನ ಕೇಂದ್ರದಲ್ಲಿ 5 ಸಾವಿರ ಕ್ಯೂಸೆಕ್‌ ನೀರು ಹರಿಯಬೇಕಿದೆ ಎಂದು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ತನ್ನ ಸಭೆಯಲ್ಲಿ ತಿಳಿಸಿದೆ. ರಾಜ್ಯಕ್ಕೆ ಮತ್ತಷ್ಟು ಸಂಕಷ್ಟ ತಂದಿದೆ.