ಗೋಣಿಕೊಪ್ಪಲಿನಲ್ಲಿ ದಸರಾ ಸಮಿತಿಯ 47ನೇ ವರ್ಷದ ಕಾರ್ಯಕ್ರಮ ಪಟ್ಟಿಯನ್ನು ಅಧ್ಯಕ್ಷ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಬಿಡುಗಡೆಗೊಳಿಸಿದರು. ಕಲ್ಲುಚಂಡ ಪ್ರಮೋದ್ ಗಣಪತಿ, ಮಂಜುಳಾ, ಚಂದನ್ ಕಾಮತ್, ಬಿ.ಎನ್.ಪ್ರಕಾಶ್ ಇತರರಿದ್ದರು. 
ನ್ಯೂಸ್

ಕಾವೇರಿ ದಸರಾ ಸಮಿತಿ ಕಾರ್ಯಕ್ರಮ ಪಟ್ಟಿ ಬಿಡುಗಡೆ

ಗೋಣಿಕೊಪ್ಪಲು: ಇಲ್ಲಿನ ಗ್ರಾಮ ಪಂಚಾಯಿತಿ ಹಳೆಯ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಮಾಧ್ಯಮ ಸಂಚಾಲಕರಾದ ಪಿ.ಕೆ ಪ್ರವೀಣ್ ಅಧ್ಯಕ್ಷತೆಯಲ್ಲಿ ಕಾರ್ಯಾಧ್ಯಕ್ಷರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಅವರು ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯಿಂದ ಬರುವ ಅ.2 ವರೆಗೆ ನಡೆಯುವ ಜನೋತ್ಸವ ಕಾರ್ಯಕ್ರಮ ಪಟ್ಟಿ ಬಿಡುಗಡೆ ಮಾಡಿದರು.

ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಮಂಜುಳಾ, ಸಂಚಾಲಕರಾದ ಚಂದನ್, ಕಾಮತ್, ಗೌರವ ಸಲಹೆಗಾರರಾದ ಬಿ.ಎನ್.ಪ್ರಕಾಶ್ ಯುವ ದಸರಾ ಸಮಿತಿ ಅಧ್ಯಕ್ಷರಾದ ನಾಮೇರ ಅಂಕಿತ್ ಪೊನ್ನಪ್ಪ ಉಪಸ್ಥಿತರಿದ್ದರು. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಪ್ರಸಾಸ್ತ್ಯ ನೀಡಲಾಗಿದ್ದು, ಸಂಭಾವನೆ ಕೂಡ ಹೆಚ್ಚು ನೀಡುವ ಚಿಂತನೆ ನಡೆದಿದೆ.