ಆನಂದಪುರ: ಬೆಳೆಗಳ ರಕ್ಷಣೆಗಾಗಿ ಕೀಟನಾಶಕ ಬಳಸುವಾಗ ಮುಂಜಾಗ್ರತೆ ಅಗತ್ಯವಿದೆ. ನಿರ್ಲಕ್ಷ ್ಯವಹಿಸಿದರೆ ಜೀವಕ್ಕೆ ಅಪಾಯವಾಗುತ್ತದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಿಜ್ವಾನ್ ಸಾಬ್ ತಿಳಿಸಿದರು.
ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಬುಧವಾರ ಇನ್ಸೆಕ್ಟಿಸೈಡ್ಸ್ ಇಂಡಿಯಾ ಸಂಸ್ಥೆ ಕೀಟನಾಶಕಗಳ ಬಳಕೆ ಬಗ್ಗೆ ರೈತರಿಗಾಗಿ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೀಟನಾಶಕ ಬಳಕೆ ಸಂದರ್ಭದಲ್ಲಿ ರೈತರು ಆಹಾರ ಪದಾರ್ಥಗಳ ಜತೆ ಔಷಧ ಒಯ್ಯಬಾರದು. ಎಲೆ, ಅಡಕೆ, ಗುಟ್ಖಾ, ಚಾಕಲೆಟ್ ಇತ್ಯಾದಿ ಸಹ ತಿನ್ನಬಾರದು. ಮಾಸ್ಕ್, ಸೇಫ್ಟಿ ಬಟ್ಟೆ , ಕೈಗಳಿಗೆ ಗ್ಲೌಸ್ ಇತ್ಯಾದಿ ಸುರಕ್ಷಿತ ವಸ್ತುಗಳನ್ನು ಬಳಸುವಂತೆ ಸಲಹೆ ನೀಡಿದರು.
ಸಂಸ್ಥೆಯ ಅಧಿಕಾರಿ ಗವಿಸಿದ್ದೇಶ, ಸೇಲ್ಸ್ ಅಧಿಕಾರಿ ಸುದರ್ಶನ, ಅರವಿಂದ, ನಿರಂಜನ, ರೈತ ಸಂಪರ್ಕ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕ ಮಂಜುನಾಥ್ ಉಪಸ್ಥಿತರಿದ್ದರು.