ನ್ಯೂಸ್

VIDEO: ಸುದೀರ್ಘವಾಗಿ ಯೋಚಿಸಿ, ಆಲೋಚಿಸಿ ನಾಯಿಗೆ ಹೊಡೆದು ಓಡಿದ ಬೆಕ್ಕು...ಈ ಚೇಷ್ಟೆಯನ್ನು ನೋಡಿದರೆ ನೀವು ನಗುವುದು ಪಕ್ಕಾ...!

lakshmihegde

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ಸಿಕ್ಕಾಪಟೆ ನಗು ತರಿಸುತ್ತವೆ. ಅದರಲ್ಲೂ ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳಂತೂ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸುವುದರಲ್ಲಿ ಅನುಮಾನವೇ ಇಲ್ಲ.

ಹಾಗೇ ನಾಯಿ ಮತ್ತು ಬೆಕ್ಕಿನ ಹಳೇ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ. ಇದನ್ನು ನೋಡಿದಷ್ಟೂ ಮತ್ತೊಮ್ಮೆ ನೋಡಿ ನಗಬೇಕು ಎನ್ನಿಸುತ್ತದೆ.

ಕೀಟಲೆ ಬುದ್ಧಿಯ ಬೆಕ್ಕೊಂದು ನಾಯಿಗೆ ತೊಂದರೆ ಕೊಡುವ, ಚೇಷ್ಟೆ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಹಾಗೆ ನಾಯಿಯ ತಂಟೆಗೆ ಹೋಗುವ ಮೊದಲು ಬೆಕ್ಕು ಯೋಚಿಸಿದ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇದೊಂದು 36 ಸೆಕೆಂಡ್​ಗಳ ವಿಡಿಯೋ. ಒಂದೇ ಮನೆಯಲ್ಲಿ ಸಾಕಲಾದ ಪ್ರಾಣಿಗಳು ಇವು. ಬಿಳಿ ಬಣ್ಣದ ನಾಯಿ ಸೋಫಾ ಮೇಲೆ ಕುಳಿತಿದ್ದರೆ, ಸೋಫಾದ ಕೈ ಮೇಲೆ ಕಪ್ಪುಬಣ್ಣದ ಬೆಕ್ಕು ಕುಳಿತಿರುತ್ತದೆ. ನಾಯಿ ತನ್ನ ಮುಂದಿರುವ ಏನನ್ನೋ ನೋಡುವುದರಲ್ಲಿ ಮಗ್ನವಾಗಿರುತ್ತದೆ. ಆದರೆ ಬೆಕ್ಕು ಮಾತ್ರ ನಾಯಿಯನ್ನೇ ನೋಡುತ್ತಿರುತ್ತದೆ. ಹಾಗೇ ಕೆಲ ಹೊತ್ತು ನಾಯಿಯನ್ನು ನೋಡಿದ ಬೆಕ್ಕು ನಿಧಾನಕ್ಕೆ ತನ್ನ ಮುಂದಿನ ಒಂದು ಕಾಲನ್ನು ಎತ್ತಿ ನಾಯಿಗೆ ಹೊಡೆದು ಕ್ಷಣವೇ ಓಡಿಹೋಗುತ್ತದೆ. ಆ ಬೆಕ್ಕು ನಾಯಿಗೆ ಹೊಡೆಯುವುದಕ್ಕೂ ಮೊದಲು ಐದಾರು ಸೆಕೆಂಡ್​ಗಳ ಕಾಲ ಅದನ್ನೇ ನೋಡುತ್ತ ಯೋಚನೆ ಮಾಡುವುದು ತುಂಬ ಚೆಂದ ಎನ್ನಿಸುತ್ತದೆ.

ರೆಡಿಟ್​, ಯೂಟ್ಯೂಬ್​ಗಳಲ್ಲಿ ಪೋಸ್ಟ್ ಆದ ವಿಡಿಯೋ ಅಪಾರ ಪ್ರಮಾಣದಲ್ಲಿ ವೈರಲ್ ಆಗುತ್ತಿದ್ದು ಲೈಕ್ಸ್​ಗಳೊಂದಿಗೆ ಮೆಚ್ಚುಗೆಯ ಕಾಮೆಂಟ್​ಗಳೂ ಬರುತ್ತಿವೆ.(ಏಜೆನ್ಸೀಸ್​)