ನ್ಯೂಸ್

ಜೈಲಿಗೆ ಮಾದಕವಸ್ತು ಸಾಗಾಟ ಮಾಡ್ತಿದ್ದ ಬೆಕ್ಕು! ಜೈಲಿನ ಗೋಡೆ ಏರುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿತ್ತು...Cat

ಕೊಸ್ಟಾರಿಕಾ:  ( Cat ) ಕೋಸ್ಟರಿಕಾ ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಜೈಲಿನ ಹೊರಗಿನ ಬೇಲಿಯ ಮೇಲೆ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಬೆಕ್ಕನ್ನು ಪೊಲೀಸರು ಜಾಣತನದಿಂದ ಹಿಡಿದರು. ಅದನ್ನು ಪರಿಶೀಲಿಸಿದಾಗ ಪೊಲೀಸರು ಆಘಾತಕ್ಕೊಳಗಾದರು. ಬೆಕ್ಕಿನ ದೇಹಕ್ಕೆ ಬಿಳಿ ಮತ್ತು ಕಪ್ಪು ಪ್ಯಾಕೆಟ್‌ಗಳನ್ನು ಟೇಪ್ ಮಾಡಲಾಗಿತ್ತು. ಕೊನೆಗೆ ಅವುಗಳನ್ನು ತೆರೆದಾಗ ಮಾದಕ ವಸ್ತುಗಳು ಇರುವುದು ಪತ್ತೆಯಾಗಿದೆ.

ಒಂದು ಪ್ಯಾಕೆಟ್‌ನಲ್ಲಿ 236 ಗ್ರಾಂ ಗಾಂಜಾ ಇದ್ದರೆ, ಇನ್ನೊಂದು ಪ್ಯಾಕೆಟ್‌ನಲ್ಲಿ 68 ಗ್ರಾಂ ಕ್ರ್ಯಾಕ್ ಪೇಸ್ಟ್ ಮತ್ತು ಎರಡು ರೋಲಿಂಗ್ ಪೇಪರ್ ಹಾಳೆಗಳಿದ್ದವು. ಈ ಘಟನೆ ಮಧ್ಯ ಅಮೆರಿಕದ ಈಶಾನ್ಯ ಕೋಸ್ಟರಿಕಾದಲ್ಲಿ ನಡೆದಿದೆ. ಜೈಲಿನಲ್ಲಿರುವ ಕೈದಿಗಳಿಗೆ ಮಾದಕ ದ್ರವ್ಯಗಳನ್ನು ಪೂರೈಸಲು ಈ ಬೆಕ್ಕಿಗೆ ತರಬೇತಿ ನೀಡಲಾಗಿತ್ತು ಎಂದು ಶಂಕಿಸಲಾಗಿದೆ. ಬೆಕ್ಕನ್ನು ಕೋಸ್ಟಾ ರಿಕನ್ ರಾಷ್ಟ್ರೀಯ ಪ್ರಾಣಿ ಆರೋಗ್ಯ ಸೇವಾ ಕೇಂದ್ರಕ್ಕೆ ಕರೆದೊಯ್ಯಲಾಯಿತು.

ಈ ಬೆಕ್ಕಿಗೆ ತರಬೇತಿ ನೀಡಿದವರು ಯಾರು? ಗಾಂಜಾವನ್ನು ಎಲ್ಲಿಂದ ಕಳುಹಿಸಲಾಗುತ್ತಿದೆ ಮತ್ತು ಇದರ ಹಿಂದೆ ಬೇರೆ ಯಾರ ಕೈವಾಡವಿದೆ ಎಂಬುದರ ಕುರಿತು ಕೈದಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಔಷಧಿಗಳನ್ನು ತಲುಪಿಸಲು ಬೆಕ್ಕನ್ನು ಬಳಸುವ ಕಲ್ಪನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.

ಈ ವಿಡಿಯೋ ಪ್ರಸ್ತುತ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.