ಕಲಬುರಗಿ: ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ನೂರಾರು ಭಕ್ತರ ಮಧ್ಯೆ ಶ್ರೀ ಸಿದ್ಧಲಿಂಗೇಶ್ವರ ರಥೋತ್ಸವ ಗುರುವಾರ ನಡೆಸಲಾಗಿದ್ದು, ನಿಷೇಧಾಜ್ಞೆ ಉಲ್ಲಂಘನೆ ಹಿನ್ನೆಲೆಯಲ್ಲಿ ದೇವಸ್ಥಾನ ಕಮಿಟಿಯ 40ಕ್ಕೂ ಹೆಚ್ಚು ಸದಸ್ಯರ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಣೆಯ ದೂರು ದಾಖಲಾಗಿದೆ.
ಕರೊನಾ ವೈರಸ್‌ನಿಂದಾಗಿ ಜಿಲ್ಲಾದ್ಯಂತ ಯಾವುದೇ ಜಾತ್ರೆ- ಉತ್ಸವ, ಸಭೆ- ಸಮಾರಂಭ ನಡೆಸದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ರಥೋತ್ಸವ ನಡೆಸಲಾಗಿದೆ. ರಾವೂರ ಗ್ರಾಮದಿಂದ 4 ಕಿಮೀ. ದೂರದಲ್ಲಿರುವ ವಾಡಿಯಲ್ಲಿ ಮಗುವೊಂದಕ್ಕೆ ಕರೊನಾ ಪಾಸಿಟಿವ್ ಬಂದಿದ್ದು, ಸಾಕಷ್ಟು ಎಚ್ಚರ ವಹಿಸಬೇಕಿತ್ತು. ಆದರೆ ಇದ್ಯಾವುದನ್ನು ಗಮನಿಸದೆ ನೂರಾರು ಭಕ್ತರ ಮಧ್ಯೆ ರಥೋತ್ಸವ ನಡೆದಿದೆ.
ಜಾತ್ರೆ ನಡೆಸಿರುವುದು ಜಿಲ್ಲಾಡಳಿತದ ಗಮನಕ್ಕೆ ಬರುತ್ತಿದ್ದಂತೆ ದೂರು ದಾಖಲಾಗಿದೆ.