ನ್ಯೂಸ್

7 ವರ್ಷದ ಮಗುವಿನ ಮೇಲೆ ಬಿಸಿ ಟೀ ಚೆಲ್ಲಿದ ವೈಟರ್​!; ಪ್ರಕರಣ ದಾಖಲಿಸಿದ ಪೋಷಕರು

ಮುಂಬೈ: ತನ್ನ ಪೋಷಕರೊಂದಿಗೆ ಫೈ-ಸ್ಟಾರ್​ ಹೋಟೆಲ್​ಗೆ ಆಗಮಿಸಿದ್ದ ಏಳು ವರ್ಷದ ಮಗುವಿನ ಮೇಲೆ ವೈಟರ್ ಬಿಸಿ ಟೀ​ ಚೆಲ್ಲಿದ ಪರಿಣಾಮ ಮಗುವಿಗೆ ಸುಟ್ಟ ಗಾಯಗಳಾಗಿದ್ದು, ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಇದೀಗ ಹೋಟೆಲ್​ನ ವೈಟರ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಎಫ್ಐಆರ್ ಪ್ರಕಾರ, ಸೆಪ್ಟೆಂಬರ್ 29 ರಂದು ಬೆಳಗ್ಗೆ 9:30ಕ್ಕೆ, ಗುರ್ಗಾಂವ್ ಮೂಲದ ನಿಶಾಂತ್ ಜೈನ್ (50) ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೆ.ಡಬ್ಲ್ಯೂನಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಉಪಹಾರಕ್ಕಾಗಿ ಆಗಮಿಸಿದ್ದರು. ಈ ವೇಳೆ ಮ್ಯಾರಿಯಟ್ ಹೋಟೆಲ್‌ನಲ್ಲಿ ಸೆಪ್ಟೆಂಬರ್ 24 ರಂದು ರೂಂ ಅನ್ನು ಕಾಯ್ದಿರಿಸಿದ್ದರು.

ಮೊನಾಲಿಸಾ ಬಸುಮತಿ ಎಂಬ ವೈಟರ್​ ಬಿಸಿ ಟೀ ಕೆಟಲ್ ಅನ್ನು ಹೊತ್ತೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಮೈರಾಗೆ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ಅವರ ಕೈಯಲ್ಲಿದ್ದ ಟೀ ಬಾಲಕಿಯ ಎಡಗೈ ಮೇಲೆ ಚೆಲ್ಲಿದೆ. ಇದರಿಂದಾಗಿ ಆಕೆಗೆ ಸುಟ್ಟ ಗಾಯಗಳಾಗಿದೆ. ತೀವ್ರ ನೋವಿನಿಂದ ಅಳಲು ಪ್ರಾರಂಭಿಸಿದ ಮೈರಾಳನ್ನು ವೈಟರ್​ ಬಾಸುಮತಿ, ಯಾರಿಗೂ ತಿಳಿಸದಂತೆ ಸುಮ್ಮನಿರುವಂತೆ ಕೋರಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಅರಿತ ಮಗುವಿನ ತಂದೆ ಜೈನ್, ಮಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು, ಸುಟ್ಟಗಾಯಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯ ಕುಟುಂಬವು ಸಹರ್ ಪೊಲೀಸ್ ಠಾಣೆಯಲ್ಲಿ ವೈಟರ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ,(ಏಜೆನ್ಸೀಸ್).