ನ್ಯೂಸ್

ನಿಮಗಿದು ಗೊತ್ತೇ ; ವಿಮಾನದಲ್ಲಿ 1 ಲೀಟರ್​ಗಿಂತ ಹೆಚ್ಚಿನ ನೀರನ್ನು ಸಾಗಿಸುವಂತಿಲ್ಲ? Plane

Plane : ಯಾರಾದ್ರೂ ವಿಮಾನದಲ್ಲಿ ಚಲಿಸಬೇಕಾದರೆ ಒಂದಷ್ಟು ನಿಯಮಗಳನ್ನ ಗಮನದಲ್ಲಿಟ್ಟುಕೊಂಡು ಪ್ರಯಾಣಿಸಬೇಕಾಗುತ್ತದೆ. ಪ್ರಯಾಣಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಬೇಕೆಂದರೆ ಕೇವಲ 1 ಲೀಟರ್​ ನೀರನ್ನು ಅಥವಾ ದ್ರವ ಭರಿತ ವಸ್ತುಗಳನ್ನು ಸಾಗಿಸಲು ಅವಕಾಶ ಕಲ್ಪಿಸಲಾಗಿದೆ.

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ರಚಿಸಿರುವ ನಿಯಮದ ಅನ್ವಯ ಎಲ್ಲಾ ವಿಮಾನಗಳು ಈ ನಿಯಮವನ್ನು ಜಾರಿಗೆ ತಂದವು. ಅಂದಿನಿಂದ ಇಲ್ಲಿಯವರೆಗೆ ಪ್ರಪಂಚದಾದ್ಯಂತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿನ ಪ್ರಯಾಣಿಕರು ತಮ್ಮೊಂದಿಗೆ 100 ಮಿಲಿ (1 ಲೀಟರ್) ದ್ರವವನ್ನು ಮಾತ್ರ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.

ಕೇವಲ 1 ಲೀಟರ್​ ನೀರು ಅಥವಾ ದ್ರವವನ್ನು ಏಕೆ ಸಾಗಿಸಬೇಕು.?

ಪ್ರಪಂಚದ ಯಾವುದೇ ವಿಮಾನದಲ್ಲಿ ಪ್ರಯಾಣಿಕರು ಹೆಚ್ಚಿನ ದ್ರವವನ್ನು ಸಾಗಿಸಲು ಏಕೆ ಅನುಮತಿಸುವುದಿಲ್ಲ ಎಂಬುದನ್ನು ನಾವೀಗ ತಿಳಿಯೋಣ.

19 ವರ್ಷಗಳ ಹಿಂದೆ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯೇ ಇದಕ್ಕೆ ಬಹು ಮುಖ್ಯ ಕಾರಣವಾಗಿದೆ. 2006 ರಲ್ಲಿ ಒಬ್ಬ ಬಯೋತ್ಪಾದಕ ನೀರಿನ ಬಾಟಲಿಯಲ್ಲಿ ಸ್ಫೋಟಕವನ್ನು ಅಡಗಿಸಿಟ್ಟಿದ್ದನು. ಸದ್ಯ ಆ ಸಂದರ್ಭದಲ್ಲಿ ಇದನ್ನು ಗಮನಿಸಿದ್ದ ಅಧಿಕಾರಿಗಳು ಆತನನ್ನು ತಡೆದು ಅಪಾಯ ತಪ್ಪಿಸಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ, ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ವಿಮಾನದಲ್ಲಿ ಕೇವಲ 1 ಲೀಟರ್​ ದ್ರವ ಭರಿತ ವಸ್ತುವನ್ನು ಮಾತ್ರ ಸಾಗಿಸಲು ಅವಕಾಶ ಎಂಬ ನಿಯಮವನ್ನು ಜಾರಿಗೆ ತಂದಿತು.

ಹೀಥ್ರೂ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ಮಾಡಿದ್ದೇನು?

2006 ರಲ್ಲಿ ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಪ್ರಯಾಣಿಕರು ವಿಮಾನ ನಿಲ್ದಾಣದ ಭದ್ರತಾ ತಪಾಸಣೆಗೆ ಒಳಗಾಗುವ ಮೊದಲು ತಮ್ಮ ನೀರಿನ ಬಾಟಲಿಗಳನ್ನು ಅವರ ಬ್ಯಾಗ್​ಗಳಲ್ಲಿ ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಭದ್ರತಾ ಅಧಿಕಾರಿಗಳು ಪ್ರಯಾಣಿಕರ ಬಾಟಲಿಗಳನ್ನು ಪರಿಶೀಲಿಸಿದಾಗ, ವಿಚಿತ್ರ ಮತ್ತು ಅನುಮಾನಾಸ್ಪದವಾದ ವಸ್ತು ಇರುವುದು ಕಂಡುಬಂತು. ಭದ್ರತಾ ಅಧಿಕಾರಿಗಳು ಆ ಬಾಟಲಿಯಲ್ಲಿದ್ದ ದ್ರವವನ್ನು ಪರೀಕ್ಷಿಸಿ ನೋಡಿದಾಗ ಕೆಲವು ಬಾಟಲಿಗಳಲ್ಲಿ ಸ್ಫೋಟಕಗಳಿಂದ ತುಂಬಿದ್ದು ಕಂಡುಬಂತು. ಈ ಪ್ರಕರಣದ ಹಿಂದೆ ಭಯೋತ್ಪಾದಕ ಸಂಚು ಇರುವುದು ಬೆಳಕಿಗೆ ಬಂದಿತ್ತು. ಇದರಲ್ಲಿ ಕೆಲವು ಭಯೋತ್ಪಾದಕ ಗುಂಪುಗಳು ನೀರಿನ ಬಾಟಲಿಗಳು ಮತ್ತು ಇತರ ಸಾಮಾನ್ಯ ವಸ್ತುಗಳ ಮೂಲಕ ವಿಮಾನ ನಿಲ್ದಾಣದೊಳಗೆ ಸ್ಫೋಟಕ ವಸ್ತುಗಳನ್ನು ಸಾಗಿಸಲು ಪಿತೂರಿ ನಡೆಸಲು ಪ್ರಯತ್ನಿಸುತ್ತಿದ್ದವು. ಅದೃಷ್ಟವಶಾತ್, ಭದ್ರತಾ ತಪಾಸಣೆಯ ಸಮಯದಲ್ಲಿ ಈ ಬಾಟಲಿಗಳನ್ನು ಗುರುತಿಸಿದ್ದರಿಂದ ಭಯೋತ್ಪಾದಕರ ಪ್ಲಾನ್​ ವಿಫಲವಾಯ್ತು. ಅಂದಿನಿಂದ ವಿಮಾನ ನಿಲ್ದಾಣಗಳಲ್ಲಿ ದ್ರವ ಪದಾರ್ಥಗಳ ಬಗ್ಗೆ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಯ್ತು.