ಎಂಡೋ ಸಂತ್ರಸ್ತ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 
ನ್ಯೂಸ್

ಎಂಡೋ ಸಂತ್ರಸ್ತರ ಆರೈಕೆ ಸವಾಲಿನ ಕೆಲಸ

ಇಂದಿರಾ ಎನ್ ಕೆ
ಕಡಬ: ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳನ್ನು ಪಾಲನೆ ಮಾಡುವಾಗ ಶ್ರಮ ಮತ್ತು ತಾಳ್ಮೆ ಮುಖ್ಯ. ಅವರ ಆರೈಕೆ ಮಾಡುವುದು ವೈದ್ಯಕೀಯ ಕ್ಷೇತ್ರದ ಸವಾಲು ಆಗಿದ್ದು, ಇಲ್ಲಿನ ಸಿಬ್ಬಂದಿ ಕಾರ್ಯ ಪ್ರಶಂಸನೀಯ ಎಂದು ಕೊಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ ಹೇಳಿದರು. ಕೊಲ ಎಂಡೋ ಪಾಲನಾ ಕೇಂದ್ರದಲ್ಲಿ ಪಾಲಕರ ಸಭೆ, ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. 
ದ.ಕ. ಜಿಲ್ಲಾ ಎಂಡೋ ಸೆಲ್ ಸಂಯೋಜಕ ಶಜೀವುದ್ದೀನ್ ಮಾತನಾಡಿದರು. ಉದ್ಭವ್ ಎಜುಕೇಶನ್ ಆ್ಯಂಡ್ ಗ್ರಾಮೀಣಾಭಿವೃದ್ಧಿ ಸೊಸೈಟಿ ಕಾರ್ಯದರ್ಶಿ ಚಂದ್ರಕಲಾ ಬಾ ಅಧ್ಯಕ್ಷತೆ ವಹಿಸಿದ್ದರು. ಕೊಲ ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಪುಷ್ಪಾ ಸುಭಾಶ್ ರೈ, ಉದ್ಭವ್ ಸಂಸ್ಥೆಯ ಕಾರ‌್ಯನಿರ್ವಹಣಾಧಿಕಾರಿ ಶಿವಾನಂದ, ಪಾಲಕರಾದ ಬಾಲಕೃಷ್ಣ ಮಾತನಾಡಿದರು. 
ಪುಷ್ಪಾ ಸುಭಾಶ್ ರೈ ಅವರನ್ನು ಸನ್ಮಾನಿಸಲಾಯಿತು. ಕೊಲ ಆರೋಗ್ಯ ಕೇಂದ್ರದ ರವಿಶಂಕರ್, ಮರಿಯಮ್ಮ, ಕೆ.ಸಿ.ಫಾರ್ಮ್ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಅನುಪಮಾ, ವಿಕಲಾಂಗ ಪುನರ್ವಸತಿ ಕಾರ್ಯಕರ್ತೆ ಆತಿಕಮ್ಮ, ಪಂಚಾಯಿತಿ ಕಾರ‌್ಯದರ್ಶಿ ಪಮ್ಮು, ಅಂಗನವಾಡಿ ಕಾರ‌್ಯಕರ್ತೆ ಯಮುನಾ ಇದ್ದರು. ಎಂಡೋ ಪಾಲನಾ ಕೇಂದ್ರದ ವ್ಯವಸ್ಥಾಪಕಿ ಶೈನಿ ಸ್ವಾಗತಿಸಿದರು. ನಮಿತಾ ವಂದಿಸಿದರು. ಹವ್ಯ, ಇಂತಿಯಾಝ್ ನಿರೂಪಿಸಿದರು.

ಪ್ರತಿಭಾ ಪ್ರದರ್ಶನ

ಎಂಡೋ ಸಂತ್ರಸ್ತ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗಿನಿಂದ ಸಂತ್ರಸ್ತ ಮಕ್ಕಳ ತುಳು ಜಾನಪದ ಹಾಡು, ಕನ್ನಡ ಭಕ್ತಿಗೀತೆ, ದೇಶಭಕ್ತಿ ಗೀತೆ, ಕನ್ನಡ ಸಿನಿಮಾ ಹಾಡಿಗೆ ಡ್ಯಾನ್ಸ್, ಯೋಗಾಸನ ನಡೆಯಿತು. ಮಕ್ಕಳು ತಯಾರಿಸಿದ ಕ್ರಾಫ್ಟ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.