ನವದೆಹಲಿ: ವಾಹನಗಳು ಅನಾಥವಾಗಿದ್ದರೆ ಕೆಲ ದಿನಗಳಲ್ಲಿಯೇ ಅದು ಇದ್ದಲ್ಲಿಂದ ಮಾಯವಾಗಿರುತ್ತದೆ ಅಥವಾ ಅದರ ಒಂದೊಂದೇ ಬಿಡಿಭಾಗಗಳನ್ನು ಕದ್ದು ಸಾಗಿಸಲಾಗಿರುತ್ತದೆ. ಪೊಲೀಸ್ ಠಾಣೆಯ ಆವರಣದಲ್ಲಿರುವ ವಶಪಡಿಸಿಕೊಂಡ ವಾಹನಗಳೂ ಇದಕ್ಕೆ ಹೊರತಲ್ಲ..!
ಆದರೆ, ಆಸ್ಟ್ರೇಲಿಯಾದ ಅಡಿಲೇಡ್ ವಿಮಾನ ನಿಲ್ದಾಣದಲ್ಲಿರುವ ಐಷಾರಾಮಿ ಕಾರು ಆರು ತಿಂಗಳಿಂದ ಅನಾಥವಾಗಿದೆ. ಇದನ್ನು ಯಾರಾದರೂ ಕದಿಯುವುದಿರಲಿ...... ಹತ್ತಿರ ಹೋಗಲು ಭಯ ಪಡುತ್ತಾರೆ ಕಾರಣ ಇದರ ನಂಬರ್ ಪ್ಲೇಟ್.
ಇದನ್ನೂ ಓದಿ; ಪಿಯುಸಿ ಅಂಕಗಳಿಂದ ನಿರಾಶರಾಗಿದ್ದೀರಾ..? ಯುಪಿಎಸ್ಸಿ ಟಾಪರ್ಗಳು 12ನೇ ಕ್ಲಾಸ್ನಲ್ಲಿ ಗಳಿಸಿದ್ದೆಷ್ಟು ನೋಡಿ…!
ಆಸ್ಟ್ರೇಲಿಯಾದಲ್ಲಿ ಮಾಲೀಕರು ಇಚ್ಛಿಸಿದ ಸಂಖ್ಯೆ ಅಥವಾ ಹೆಸರನ್ನು ವಾಹನಗಳಿಗೆ ಹೊಂದಲು ಅವಕಾಶ ಕಲ್ಪಿಸಲಾಗುತ್ತದೆ. ಅಂತೆಯೇ ಐಷಾರಾಮಿ ಬಿಎಂಡಬ್ಲ್ಯು ಕಾರಿಗೆ ಅದರ ಮಾಲೀಕ ಕೋವಿಡ್ 19 ಎಂಬ ನೋಂದಣಿ ಫಲಕ ಹೊಂದಿದ್ದಾನೆ.
ವಿಮಾನ ನಿಲ್ದಾಣದ ಸಿಬ್ಬಂದಿಗೆ ಮೀಸಲಾದ ಕಾರು ಪಾರ್ಕಿಂಗ್ ಜಾಗದಲ್ಲಿ ಇದನ್ನು ನಿಲ್ಲಿಸಲಾಗಿದೆ. ಕಳೆದ ಫೆಬ್ರವರಿಯಿಂದಲೂ ಕಾರನ್ನು ಅಲ್ಲಿ ನಿಲ್ಲಿಸಲಾಗಿದೆ. ಮೊದಲು ಅದರ ಮೇಲೆ ಹೊದಿಕೆಯಿತ್ತು. ಗಾಳಿಗೆ ಹಾರಿ ಹೋಗಿದ್ದರಿಂದ ಅದರ ನಂಬರ್ ಪ್ಲೇಟ್ ಎಲ್ಲರ ಗಮನ ಸೆಳೆಯುತ್ತದೆ. ಜತೆಗೆ ಹತ್ತಿರ ಹೋಗಲು ಹೆದರುತ್ತಾರೆ ಎಂದೇ ವಿಮಾನ ನಿಲ್ದಾಣದ ಸಿಬ್ಬಂದಿ ಹೇಳುತ್ತಾರೆ.
ಇದನ್ನೂ ಓದಿ; ದಲಿತರಿಗೆ ಮೀಸಲಾಗಿದ್ದ ಜಾಗದಲ್ಲಿ 9 ಅಂತಸ್ತಿನ ಕಟ್ಟಡ ನಿರ್ಮಿಸಿದ ಗಾಂಧಿ ಕುಟುಂಬದ ಸಂಸ್ಥೆ; ಇಡಿಯಿಂದ ವಶಕ್ಕೆ
ದಾಖಲೆಗಳ ಪ್ರಕಾರ ಕಾರಿಗೆ ಸಪ್ಟೆಂಬರ್ 2020ರ ಅವಧಿವರೆಗೆ ಈ ಹೆಸರನ್ನು ನೋಂದಣಿ ಮಾಡಿಸಲಾಗಿದೆ. ಆ ಬಳಿಕ ಕಾರಿನಿಂದ (ನವೀಕರಿಸದಿದ್ದರೆ) ಮಾತ್ರವಲ್ಲ ಜಗತ್ತಿನಿಂದಲೇ ಕೋವಿಡ್ ದೂರಾಗಬಹುದೇನೋ?