ನ್ಯೂಸ್

ಪ್ರಪಾತದಿಂದ ಉರುಳಿ ಮನೆಗೆ ಗುದ್ದಿದ ಕಾರು: ಅದೃಷ್ಟವಶಾತ್ ಐವರು ಪ್ರಾಣಾಪಾಯದಿಂದ ಪಾರು

ಚಿಕ್ಕಮಗಳೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿದ ಘಟನೆ ಕಳಸ ತಾಲೂಕಿನ ಗಂಗನಕುಡಿಕೆ ಗ್ರಾಮದಲ್ಲಿ ನಡೆದಿದೆ.

ಕಾರು ಪ್ರಪಾತದಿಂದ ಉರುಳಿ ಮನೆಯ ಗೋಡೆಗೆ ಗುದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಪ್ರವಾಸಿಗರು ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ.

ಪ್ರವಾಸಿಗರು ಬೆಂಗಳೂರು ‌ಮೂಲದವರು. ಸ್ವಲ್ಪ ಆಯ ತಪ್ಪಿದ್ದರು ಕಾರು ಮನೆಯ ಮೇಲೆ ಬೀಳುತ್ತಿತ್ತು. ಅದೃಷ್ಟವಶಾತ್​ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಕಾರಿನ ಮುಂಭಾಗ ಮಾತ್ರ ಜಖಂಗೊಂಡಿದೆ. ಈ ಘಟನೆ ಕಳಸ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. (ದಿಗ್ವಿಜಯ ನ್ಯೂಸ್​)