ನ್ಯೂಸ್

ತಹಸೀಲ್ದಾರ್ ಶೋಭಿತಾ ನಡೆಗೆ ವ್ಯಾಪಕ ಪ್ರಶಂಸೆ: ನಮಾಜ್ ಮಾಡಲು ಮುಂದಾದವರ ಸೆರೆ

ಕೋಲಾರ: ‘ಯಾರು ಹೇಳಿದ್ದು ನಿಮಗೆ ನಮಾಜ್ ಮಾಡೋಕೆ? ಗೊತ್ತಿಲ್ವಾ ನಿಮ್ಗೆ ಮಸೀದಿ ಎಲ್ಲ ಕ್ಲೋಸ್ ಮಾಡಬೇಕು ಅಂತ...’ ಎಂದು ನಿಯಮ ಉಲ್ಲಂಘಿಸಿ ಪ್ರಾರ್ಥನೆಯಲ್ಲಿ ತೊಡಗಿದ್ದವರನ್ನು ಕೋಲಾರ ತಹಸೀಲ್ದಾರ್ ಶೋಭಿತಾ ಗುರುವಾರ ತರಾಟೆಗೆ ತೆಗೆದುಕೊಂಡ ವಿಡಿಯೋ ಶುಕ್ರವಾರ ವೈರಲ್ ಆಗಿದೆ.

ಮಹಿಳಾ ಅಧಿಕಾರಿಯೊಬ್ಬರು ಪೊಲೀಸರೊಂದಿಗೆ ಮಸೀದಿ ಪ್ರವೇಶಿಸಿ ಕ್ರಮ ಜರುಗಿಸುವ ಧೈರ್ಯ ತೋರುವ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸಾರಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ನಗರದ ಮುನ್ಸಿಪಲ್ ಆಸ್ಪತ್ರೆ ಸಮೀಪವಿರುವ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.