ನವದೆಹಲಿ: ಕ್ಯಾಪ್ಟನ್ ತಾನಿಯಾ ಶೆರಗಿಲ್ ಅವರು ಈ ಬಾರಿ ಗಣ ರಾಜ್ಯೋತ್ಸವದ ಪರೇಡ್ನಲ್ಲಿ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ.
ಸೇನಾ ದಿನಾಚರಣೆಯಲ್ಲಿ ನಡೆದ ಪಥಸಂಚಲನದಲ್ಲಿ ತಾನಿಯಾ ತಮ್ಮ ತಂಡವನ್ನು ಮುನ್ನಡೆಸುತ್ತಿರುವ ವಿಡಿಯೋವನ್ನು ಮಹಿಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹಿಂದ್ರ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
"ಈ ವಿಡಿಯೋ ನನಗೆ ರೋಮಾಂಚನ ಉಂಟುಮಾಡಿತು. ಸ್ಫೂರ್ತಿದಾಯಕ ವಿಡಿಯೋ ನೋಡಿದ ಮೇಲೆ ಇವರು ನಿಜವಾದ ಸೆಲೆಬ್ರಿಟಿ ಎನಿಸಿದೆ. ಈ ವಿಡಿಯೋ ಎಲ್ಲೆಡೆ ಪ್ರಖ್ಯಾತವಾಗಬೇಕು. ಆದರೆ ಟಿಕ್ಟಾಕ್ ತರಹದಂತೆ ಅಲ್ಲ" ಎಂದಿದ್ದಾರೆ.
ಈ ಬಾರಿಯ ಪರೇಡ್ನಲ್ಲಿ ಕ್ಯಾಪ್ಟನ್ ಶೆರಗಿಲ್ ಅವರು ಪ್ರಪ್ರಥಮ ಬಾರಿಗೆ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ. ಪಥ ಸಂಚಲವನ್ನು ಮುನ್ನಡೆಸಲು ಪರೇಡ್ ಅಡ್ಜಂಟೆಂಟ್ ಮುಖ್ಯರಾಗಿರುತ್ತಾರೆ. ಕ್ಯಾಪ್ಟನ್ ತಾನಿಯಾ ಶೆರಗಿಲ್ ಗಣರಾಜ್ಯೋತ್ಸವದಲ್ಲಿ ಪುರುಷರ ತಂಡವನ್ನು ಮುನ್ನಡೆಸುವ ಮೊದಲ ಮಹಿಳಾ ಪೆರೇಡ್ ಆಗಲಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಕಮುನಿಕೇಷನ್ಸ್ನಲ್ಲಿ ಪದವಿ ಪಡೆದಿರುವ ತಾನಿಯಾ, ಚೆನ್ನೈನ ತರಬೇತಿ ಕೇಂದ್ರದಲ್ಲಿ 2017ರಲ್ಲಿ ಬ್ಯಾಚ್ನವರು. ತಾನಿಯಾ ಅವರ ತಂದೆ, ಅಜ್ಜ ಮತ್ತು ಮುತ್ತಜ್ಜ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)