ನವದೆಹಲಿ: ಜನಪ್ರಿಯ ಫೋಟೋ ಎಡಿಟಿಂಗ್ ಪರಿಕರವಾದ ಕ್ಯಾನ್ವಾ (Canva) ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಭಾರತದಲ್ಲಿನ ಬಳಕೆದಾರರು ಮುಖ್ಯ ಸೈಟ್ ಮತ್ತು ಸೇವೆಗೆ ಸಂಬಂಧಿಸಿದ ಲಿಂಕ್ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ.
ಗೂಗಲ್ ಕ್ರೋಮ್ನಲ್ಲಿ ಮುಖ್ಯ ಸೈಟ್ನ್ನು ಪ್ರವೇಶಿಸಲು ಸಾಧ್ಯಾವಾಗುತ್ತಿಲ್ಲ. ಇದು ಸರ್ವರ್ ದೋಷವನ್ನು ಎದುರಿಸುತ್ತಿದೆ. ಹಾಗೆಯೇ ಐಒಎಸ್ ಅಪ್ಲಿಕೇಶನ್ ಸಹ ಕಾರ್ಯನಿರ್ವಹಿಸುತ್ತಿಲ್ಲ. ಲ್ಯಾಂಡಿಂಗ್ ಪುಟವು "ನಮ್ಮ ಕಡೆಯಿಂದ ಯಾವುದೇ ಕೆಲಸ ಮಾಡುತ್ತಿಲ್ಲ. ನೀವು ಪುನಃ ಪ್ರಯತ್ನಿಸಬಹುದು. ಕೆಲವೊಮ್ಮೆ ನಾವು ಕೆಲವು ಸೆಕೆಂಡುಗಳಲ್ಲಿ ಹಿಂದಿರುಗುತ್ತೇವೆ. ಇಲ್ಲದಿದ್ದರೆ ನವೀಕರಣಗಳು ಮತ್ತು ಸಹಾಯಕ್ಕಾಗಿ ಸ್ಥಿತಿ ಪುಟವನ್ನು ಪರಿಶೀಲಿಸಿ ಎಂಬ ಸಂದೇಶವನ್ನು ನೀಡುತ್ತಿದೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಬೆಲೆಬಾಳುವ ಕಿರೀಟ, ವಜ್ರ… 7 ನಿಮಿಷಗಳಲ್ಲಿ ಲೂಟಿ! ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈಚಳಕ | Louvre Museum
ಕ್ಯಾನ್ವಾ ತಾಂತ್ರಿಕ ಸಮಸ್ಯೆಯ ಬಗ್ಗೆ ಕೆಲವೇ ನಿಮಿಷಗಳಲ್ಲಿ ಸುಮಾರು 500ಕ್ಕೂ ಹೆಚ್ಚು ವರದಿಗಳು ದಾಖಲಾಗಿವೆ. ಕ್ಯಾನ್ವಾ ಬಳಕೆದಾರರು ಶೇಕಡಾ 58 ರಷ್ಟು ಬಳಕೆದಾರರು ವೆಬ್ಸೈಟ್ನಲ್ಲಿ ಸಮಸ್ಯೆಗಳು, ಶೇ.25 ರಷ್ಟು ಜನರು ಸರ್ವರ್ ಸಂಪರ್ಕದಲ್ಲಿ ಸಮಸ್ಯೆ ಮತ್ತು ಶೇ. 17 ರಷ್ಟು ಜನರು ಅಪ್ಲಿಕೇಶನ್‌ನಲ್ಲಿ ಸಮಸ್ಯೆಗಳನ್ನು ವರದಿ ಮಾಡುತ್ತಿದ್ದಾರೆ.
ಕ್ಯಾನ್ವಾ ಮತ್ತು ಅದರ ವೈಶಿಷ್ಟ್ಯಗಳು ಪ್ರಸ್ತುತ ಕೆಲವು ಬಳಕೆದಾರರಿಗೆ ಲಭ್ಯವಿಲ್ಲ ಎಂದು ನಮಗೆ ತಿಳಿದಿದೆ. ನಮ್ಮ ತಂಡವು ಸಮಸ್ಯೆಯನ್ನು ಸಕ್ರಿಯವಾಗಿ ತನಿಖೆ ಮಾಡುತ್ತಿದೆ ಮತ್ತು ಸಾಧ್ಯವಾದಷ್ಟು ಬೇಗ ಪೂರ್ಣ ಪ್ರವೇಶವನ್ನು ಮರುಸ್ಥಾಪಿಸಲು ಕೆಲಸ ಮಾಡುತ್ತಿದೆ" ಎಂದು ಕ್ಯಾನ್ವಾ ಅಧೀಕೃತವಾಗಿ ತಿಳಿಸಿದೆ. (ಏಜೆನ್ಸೀಸ್)