ನ್ಯೂಸ್

711 ಸವಾರರ ಡಿಎಲ್ ರದ್ಧು

ಬೆಂಗಳೂರು: ಮಾರಣಾಂತಿಕ ಅಪಘಾತ ಮತ್ತು ಸಂಚಾರ ನಿಯಮ ಉಲ್ಲಂಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚಾಲಕ, ಸವಾರರ 711 ಚಾಲನಾ ಪರವಾನಗಿಯನ್ನು (ಡಿಎಲ್) ಆರ್‌ಟಿಒ ಅಧಿಕಾರಿಗಳು ರದ್ದುಪಡಿಸಿದ್ದಾರೆ.

ನಗರದಲ್ಲಿ ಸಂಚಾರ ನಿಯಮ ಉಲ್ಲಂಸಿದ ಮತ್ತು ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ ಭಾಗಿಯಾಗಿದ್ದ 2,974 ಚಾಲಕ, ಸವಾರರ ಡಿಎಲ್‌ಗಳನ್ನು ಜಪ್ತಿ ಮಾಡಲಾಗಿತ್ತು.

ನಿಯಮದಂತೆ ಈ ಡಿಎಲ್‌ಗಳನ್ನು ಅಮಾನತು ಮಾಡುವಂತೆ ಬೆಂಗಳೂರು ಸೇರಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಶಿಾರಸು ಮಾಡಲಾಗಿತ್ತು. ಉಳಿದ 2,263 ಡಿಎಲ್‌ಗಳ ಅಮಾನತುಪಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.