ಕೆನಡಾ; ಇಂದು (ಸೆ.29) ಅಧಿಕೃತವಾಗಿ ಕೆನಡಾ ಸರ್ಕಾರ ಭಯಾನಕ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಬಿಷ್ಣೋಯ್ ಗ್ಯಾಂಗ್ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರಿ ಇಂದು ಈ ಘೋಷಣೆ ಹೊರಡಿಸಿದ್ದಾರೆ. ಈ ಗ್ಯಾಂಗ್ ಕೊಲೆ, ಗುಂಡಿನ ದಾಳಿ, ಬೆಂಕಿ ಹಚ್ಚುವಿಕೆ, ಸುಲಿಗೆ ಮತ್ತು ಬೆದರಿಕೆಯ ಮೂಲಕ ಭಯೋತ್ಪಾದನೆಯನ್ನು ಹರಡುವಲ್ಲಿ ಭಾಗಿಯಾಗಿದೆ ಎಂದು ಉಲ್ಲೇಖಿಸಿದೆ.
ಇದನ್ನೂ ಓದಿ: POK ಯಲ್ಲಿ ಭುಗಿಲೆದ್ದ ಬೃಹತ್ ನಾಗರಿಕ ಪ್ರತಿಭಟನೆ: ಪಾಕ್ ಭದ್ರತಾ ಪಡೆಗಳ ನಿಯೋಜನೆ, ಇಂಟರ್ನೆಟ್ ಸ್ಥಗಿತ..!
ಹೇಳಿಕೆಯ ಪ್ರಕಾರ, ಭಯೋತ್ಪಾದಕ ಪಟ್ಟಿ ಎಂದರೆ ಕೆನಡಾದಲ್ಲಿ ಆ ಗುಂಪಿನ ಒಡೆತನದ ಯಾವುದೇ ವಸ್ತು, ಆಸ್ತಿ, ವಾಹನಗಳು, ಹಣವನ್ನು ವಶಪಡಿಸಿಕೊಳ್ಳಬಹುದು ಮತ್ತು ಭಯೋತ್ಪಾದಕ ಅಪರಾಧಗಳನ್ನು ವಿಚಾರಣೆಗೆ ಒಳಪಡಿಸಲು ಕೆನಡಾದ ಕಾನೂನು ಜಾರಿ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ. ಜೊತೆಗೆ ಕೆನಡಾದಲ್ಲಿರುವ ಯಾರಾದರೂ ಮತ್ತು ವಿದೇಶದಲ್ಲಿರುವ ಕೆನಡಿಯನ್ನರು ಭಯೋತ್ಪಾದಕ ಗುಂಪು ನಿಯಂತ್ರಿಸಲ್ಪಡುವ ಆಸ್ತಿಯೊಂದಿಗೆ ಉದ್ದೇಶಪೂರ್ವಕವಾಗಿ ವ್ಯವಹರಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಹಿಂಸಾಚಾರ ಮತ್ತು ಭಯೋತ್ಪಾದನಾ ಕೃತ್ಯಗಳಿಗೆ ಕೆನಡಾದಲ್ಲಿ ಸ್ಥಾನವಿಲ್ಲ. ವಿಶೇಷವಾಗಿ ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಬೆದರಿಕೆಯ ವಾತಾವರಣವನ್ನು ಸೃಷ್ಟಿಸುವ ಕೃತ್ಯಗಳಿಗೆ ಇಲ್ಲಿ ಪ್ರವೇಶವಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಟ್ರಂಪ್ ಜತೆಗೆ ಇಸ್ರೇಲ್ ಗಾಜಾ ಕದನ ವಿರಾಮ ಯೋಜನೆ ಕುರಿತು ಕೆಲಸ ಮಾಡುತ್ತಿದೆ: ಪ್ರಧಾನಿ ಬೆಂಜಮಿನ್ ನೆತನ್ಯಾಹು|Ceasefire
(ಏಜೆನ್ಸೀಸ್)
ಬಿಷ್ಣೋಯ್ ಗ್ಯಾಂಗ್ ಭಾರತದಿಂದ ಹೊರಗೆ ಕಾರ್ಯನಿರ್ವಹಿಸುವ ಒಂದು ಅಂತರರಾಷ್ಟ್ರೀಯ ಅಪರಾಧ ಸಂಘಟನೆಯಾಗಿದೆ. ಅವರು ಕೆನಡಾದಲ್ಲಿ ಅಸ್ತಿತ್ವ ಹೊಂದಿದ್ದು, ಗಮನಾರ್ಹ ವಲಸೆ ಸಮುದಾಯಗಳಿರುವ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಈ ಸಮುದಾಯಗಳನ್ನು, ವ್ಯವಹಾರಗಳನ್ನು ಮತ್ತು ಇತರ ಕೆಲ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅಭದ್ರತೆಯ ವಾತಾವರಣವನ್ನು ಸೃಷ್ಟಿಸುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಿಷ್ಣೋಯ್ ಗ್ಯಾಂಗ್ ಹೆಸರನ್ನು ಪಟ್ಟಿ ಮಾಡುವುದರಿಂದ ಕೆನಡಾದ ಭದ್ರತೆ, ಗುಪ್ತಚರ ಮತ್ತು ಕಾನೂನು ಜಾರಿ ಸಂಸ್ಥೆಗಳು ಅವರ ಅಪರಾಧಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಸಚಿವಾಲಯ ಹೇಳಿದೆ. ಈ ಕ್ರಿಮಿನಲ್ ಭಯೋತ್ಪಾದಕರ ಗುಂಪನ್ನು ಪಟ್ಟಿ ಮಾಡುವುದರಿಂದ ಅವರ ಅಪರಾಧಗಳನ್ನು ಎದುರಿಸಲು ಮತ್ತು ನಿಲ್ಲಿಸಲು ನಮಗೆ ಹೆಚ್ಚು ಶಕ್ತಿ ದೊರೆಯುತ್ತವೆ ಎಂದು ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರಿ ಹೇಳಿದ್ದಾರೆ.