Actress Childhood Photo: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಇದನ್ನೂ ಓದಿ: ಕ್ರೀಡೋತ್ಸವದಿಂದ ಸಂಸ್ಕೃತಿ ಬೆಳೆಸುವ ಕಾರ್ಯ : ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ಭುವನಾಭಿರಾಮ ಉಡುಪ ಹೇಳಿಕೆ
ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಅದು ಪುಟ್ಟ ಮಗುವಿನ ಫೋಟೋ. ಆ ಫೋಟೋದಲ್ಲಿರುವ ಹುಡುಗಿ ಸಾಮಾನ್ಯ ಹುಡುಗಿಯಲ್ಲ. ಆಕೆ ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ ಸ್ಟಾರ್ ನಟಿ. ತನ್ನ ಸೌಂದರ್ಯದಿಂದಲೇ ಎಲ್ಲರ ಮನಸ್ಸು ಗೆದ್ದ ಚೆಲುವೆ. ಅಂದಹಾಗೆ, ಇವರು ಹಿಂದಿ ಭಾಷೆಗೆ ಮಾತ್ರ ಸೀಮಿತ ಎಂಬುದು ಇಲ್ಲಿ ಗಮನಾರ್ಹ.
ಕಿಂಗ್ ಖಾನ್ ಶಾರೂಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಬಾಲಿವುಡ್ ಸ್ಟಾರ್ ನಟರೊಂದಿಗೆ ನಟಿಸಿ, ದಶಕಗಳ ಕಾಲ ತೆರೆ ಮೇಲೆ ತಮ್ಮದೇಯಾದ ಛಾಫು ಮೂಡಿಸಿದ್ದಾರೆ. ಈಕೆ ಸ್ಟಾರ್ ನಟನನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರು ಮದುವೆಯಾಗಿರುವ ಸ್ಟಾರ್ ನಟ ರಾಜ ಮನೆತನಕ್ಕೆ ಸೇರಿದವರು. ಅಲ್ಲದೆ ವಯಸ್ಸಿನಲ್ಲಿ ತನಗಿಂತ ತುಂಬಾ ಹಿರಿಯರು ಕೂಡ ಹೌದು. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಓದಿ ಉತ್ತರ ಸಿಗಲಿದೆ.
ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾ ರಂಗವನ್ನು ಆಳಿದ ಬೇಬೋ ಕರೀನಾ ಕಪೂರ್. ಸದ್ಯ ಪತಿ ಸೈಫ್ ಅಲಿ ಖಾನ್ ಜತೆ ತಮ್ಮ ದಾಂಪತ್ಯ ಜೀವನವನ್ನು ಆನಂದಿಸುತ್ತಿರುವ ನಟಿ, ಕನ್ನಡದ ಸ್ಟಾರ್ ನಟ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದರು, ಆದರೆ, ದಿನಾಂಕಗಳ ಸಮಸ್ಯೆಯಿಂದ ಚಿತ್ರತಂಡದಿಂದ ಹೊರನಡೆದರು. ಈ ಬಗ್ಗೆ ಅವರ ಅಭಿಮಾನಿಗಳು ತೀವ್ರ ಬೇಸರ ಹೊರಹಾಕಿದ್ದರು.
ಅಂದಿನ ಕಾಲಕ್ಕೆ ತೆರೆಕಂಡ ‘ಕಭಿ ಖುಷಿ ಕಭಿ ಗಮ್’ (2001) ಚಿತ್ರವು ವಿದೇಶಿ ಮಾರುಕಟ್ಟೆಯಲ್ಲಿ ಬಹುದೊಡ್ಡ ಯಶಸ್ಸನ್ನು ಗಳಿಸಿತು. ‘ಚಮೇಲಿ’ (2004) ಚಿತ್ರದಲ್ಲಿ ವೇಶ್ಯೆಯ ಪಾತ್ರದಿಂದ ವಿಮರ್ಶಕರಿಂದ ಪ್ರಶಂಸೆ ಪಡೆದ ಕರೀನಾ, ‘ಜಬ್ ವಿ ಮೆಟ್’ (2007), ‘3 ಈಡಿಯಟ್ಸ್’ (2009), ‘ಬಜರಂಗಿ ಭಾಯಿಜಾನ್’ (2015) ಮತ್ತು ‘ಕ್ರ್ಯೂ’ (2024) ಚಿತ್ರಗಳ ಮೂಲಕ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು.