ಬೆಂಗಳೂರು: ನಮಗೆಲ್ಲರಿಗೂ ನೀರು ಬಹಳ ಮುಖ್ಯ. ಈ ಭೂಮಿಯಲ್ಲಿ ನೀರಿಲ್ಲದಿದ್ದರೆ ಬಹುಶಃ ನಾವೂ ಇರುತ್ತಿರಲಿಲ್ಲ. ಇಷ್ಟೆಲ್ಲಾ ಆದರೂ ನೀರಿಗೆ ಬೆಲೆ ಕೊಡದೆ ಪೋಲು ಮಾಡುವ ಕೆಲವರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀರನ್ನು ಪೋಲು ಮಾಡುವವರೆಲ್ಲರೂ ನೋಡಲೇಬೇಕು. ಅಂದಹಾಗೆ ವಿಡಿಯೋ ನೋಡಿದ ಜನರು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದು, ವೀಡಿಯೊದಲ್ಲಿ ಏನಿದೆ ನೋಡೋಣ ಬನ್ನಿ...
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳಲಾಗದು. ಆದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದರೆ ಜನ ತಕ್ಕ ಪಾಠ ಕಲಿವುದಂತೂ ಖಂಡಿತ. ಹೌದು, ಮರುಭೂಮಿಯಲ್ಲಿ ಟ್ಯಾಂಕರ್‌ನಿಂದ ನೀರು ಬಿಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಮಯದಲ್ಲಿ ಎರಡು ಒಂಟೆಗಳು ಅಲ್ಲಿ ಇರುತ್ತವೆ. ಅವು ನೀರನ್ನು ನೋಡಿದ ನಂತರ ಸಂತೋಷದಿಂದ ಜಿಗಿಯುತ್ತವೆ. ಅಷ್ಟೇ ಅಲ್ಲ, ನೀರಿನಲ್ಲಿ ಮಲಗಿ ಆನಂದಿಸುತ್ತವೆ. ಮತ್ತೆ ಕೆಲವೊಮ್ಮೆ ಎದ್ದು, ಎದ್ದು ಸಂತೋಷದಿಂದ ಜಿಗಿಯುವುದನ್ನು ಕಾಣಬಹುದು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋ ನೋಡಿ ಜನರು ಹೇಳಿದ್ದೇನು?
ಈ ವೀಡಿಯೊವನ್ನು zindagi.gulzar.h ಹೆಸರಿನ ಪುಟದಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಬಹಳ ಸಮಯದ ನಂತರ ನೀರು ನೋಡಿದ ಖುಷಿಯನ್ನು ನೀವು ನೋಡುತ್ತಿದ್ದೀರಿ ಎಂದು ವಿಡಿಯೋ ಜೊತೆಗಿನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಸುದ್ದಿ ಬರೆಯುವ ತನಕ, ವಿಡಿಯೋಗೆ 36 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ವಿಡಿಯೋ ವೀಕ್ಷಿಸಿದ ನಂತರ, ಬಳಕೆದಾರರು "ನಿಮಗೆ ಬೇಕಾದದ್ದು ಏನನ್ನಾದರೂ ನೀವು ಪಡೆದಾಗ, ಸಂತೋಷಕ್ಕೆ ಯಾವುದೇ ಮಿತಿಯಿರುವುದಿಲ್ಲ, ಪ್ರಾಣಿಗಳಿಗೂ ನೀರಿನ ಮೌಲ್ಯ ತಿಳಿದಿದೆ, ಮನುಷ್ಯನಿಗೆ ಮಾತ್ರ ತಿಳಿದಿಲ್ಲ, ನೀರಿದ್ದರೆ ನಾಳೆ ಇದೆ, ಆದ್ದರಿಂದ ದಯವಿಟ್ಟು ನೀರನ್ನು ಉಳಿಸಿ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.